ಮನೆಯಿಂದ 5೦,೦೦೦ ರೂ., ಸಿಸಿ ಟಿವಿ ಉಪಕರಣ ಕಳವು

ಪೈವಳಿಕೆ:  ಮನೆಯಿಂದ 50 ಸಾವಿರ ರೂಪಾಯಿ ನಗದು ಹಾಗೂ ೨೫ ಸಾವಿರ ರೂಪಾಯಿ ಮೌಲ್ಯದ ಸಿಸಿ ಟಿವಿ  ಡಿವಿಆರ್ ಕಳವಿಗೀಡಾದ ಬಗ್ಗೆ ದೂರಲಾಗಿದೆ.

ಪೈವಳಿಕೆ ಕಳಾಯಿ ರಸ್ತೆಯ ಅಜೆಕಳದಲ್ಲಿ ಅಶೋಕ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ.  ಅಶೋಕ್ ಕುಮಾರ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಮನೆಯಲ್ಲಿ ಇವರ ತಂದೆ ಮಾತ್ರ ವಾಸಿಸುತ್ತಿದ್ದಾರೆ. ಈ ತಿಂಗಳ 7ರಂದು ರಾತ್ರಿ ಕಳವು ನಡೆದ ಬಗ್ಗೆ ತಿಳಿದುಬಂದಿದೆ. ೮ರಂದು ಬೆಳಿಗ್ಗೆ ಸಮೀಪದಲ್ಲಿ ವಾಸಿಸುವ ಸಂಬಂಧಿಕರು ಅಶೋಕ್ ಕುಮಾರ್ ಶೆಟ್ಟಿಯವರ ತಂದೆಗೆ ಆಹಾರ ನೀಡಲು ಹೋದಾಗ ಮನೆಯ ಅಡುಗೆ ಕೋಣೆಯ ಬಾಗಿಲು ತೆರೆದಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರಿಂದ ಸಂಶಯಗೊಂಡು ಪರಿಶೀಲಿಸಿದಾಗ ಹಣ ಹಾಗೂ ಸಿಸಿ ಟಿವಿ ಉಪಕರಣಗಳು ಕಳವಿ ಗೀಡಾದ ಬಗ್ಗೆ ತಿಳಿದುಬಂದಿದೆ. ಮಾಹಿತಿ ತಿಳಿದು ಊರಿಗೆ ಬಂದ ಅಶೋಕ್ ಕುಮಾರ್ ಶೆಟ್ಟಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

RELATED NEWS

You cannot copy contents of this page