ಮನೆಯಿಂದ ನಗ-ನಗದು ಕಳವು: ಇಬ್ಬರ ಸೆರೆ
ಕಾಸರಗೋಡು: ಮನೆ ಬಾಗಿಲನ್ನು ಒಡೆದು ಒಳನುಗ್ಗಿ ೧೦ ಪವನ್ ಚಿನ್ನದ ಒಡವೆ ಮತ್ತು 1,60,000 ರೂ. ನಗದು ಕಳವುಗೈದ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸದುರ್ಗ ನಿವಾಸಿ ಮನು (36) ಮತ್ತು ಕಣ್ಣೂರು ಪುದಿಯ ಪೆರು ನಿವಾಸಿ ಸಂತೋಷ್ (43) ಬಂಧಿತ ಆರೋಪಿಗಳು. ಕಳೆದ ಸೋಮವಾರ ಕಣ್ಣೂರು ಇರಿಟ್ಟಿ ಅಯಿಚ್ಚದ ಕೆ.ಎಂ. ವೇಣುಗೋಪಾಲ್‌ರ ಬೀಗ ಜಡಿದ ಮನೆಗೆ ಒಳನುಗ್ಗಿದ ಕಳ್ಳರು ನಗ-ನಗದು ಕಳವು ಗೈದಿದ್ದರು. ಈ ಬಗ್ಗೆ ಇರಿಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.