ಮನೆಯಿಂದ ಹಾಡಹಗಲೇ ಕಳವುಗಂಟೆಗಳೊಳಗೆ ಆರೋಪಿ ಸೆರೆ

ಹೊಸದುರ್ಗ: ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳವು ನಡೆಸಿದ ಆರೋಪಿಯನ್ನು ಕೆಲವೇ ಗಂಟೆಗಳೊಳಗೆ ಪೊಲೀಸರು ಬಂಧಿಸಿದ್ದಾರೆ. ಕಾಞಂಗಾಡ್ ರೈಲ್ವೇ ನಿಲ್ದಾಣ ಬಳಿಯ ಗಾರ್ಡರ್ ವಳಪ್ ನಿವಾಸಿ ಪಿ.ಎಚ್. ಆಸಿಫ್ (22) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ನೀಲೇಶ್ವರ ಪಳ್ಳಿಕೆರೆ ಸೈಂಟ್ ಆನ್ಸ್ ಯು.ಪಿ ಶಾಲೆ ಬಳಿಯ ವ್ಯಾಪಾರಿ ಮೇಲತ್ ಸುಕುಮಾರನ್ ಎಂಬವರ ಮನೆಯಿಂದ ಐದು ಪವನ್ ಚಿನ್ನಾಭರಣ ಕಳವು ಗೈದ ಪ್ರಕರಣದಲ್ಲಿ ಆಸಿಫ್‌ನನ್ನು ಬಂಧಿಸಲಾಗಿದೆ. ಮೊನ್ನೆ ಮಧ್ಯಾಹ್ನ ಸುಕುಮಾರನ್‌ರ ಪತ್ನಿ ನೆರೆಮನೆಯ ಗೃಹಿಣಿಯೊಂದಿಗೆ ಮಾತನಾಡುತ್ತಿದ್ದ ವೇಳೆ ಮನೆಗೆ ನುಗ್ಗಿದ ಆರೋಪಿ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದನು. ಈ ಬಗ್ಗೆ ಲಭಿಸಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆಸಿಫ್ ವಿರುದ್ಧ ಕಾಸರಗೋಡು, ಕಾಞಂಗಾಡ್, ನೀಲೇಶ್ವರ ಮೊದಲಾದ ಠಾಣೆಗಳಲ್ಲಿ 12 ಕೇಸುಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page