ಮನೆಯಿಂದ ೧.೭೫ ಲಕ್ಷ ರೂ. ಮೌಲ್ಯದ ಅಡಿಕೆ ಕಳವು: ಇಬ್ಬರ ಸೆರೆ

ಮಂಜೇಶ್ವರ: ಮನೆಗೆ ಕಳ್ಳರು ನುಗ್ಗಿ ೧,೭೫,೦೦೦ ರೂ. ಮೌಲ್ಯದ ಆರು ಗೋಣಿ ಚೀಲಗಳಲ್ಲಿ ತುಂಬಿಸಿಡ ಲಾಗಿದ್ದ ಅಡಿಕೆ ಕಳವುಗೈದಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

ವರ್ಕಾಡಿ ನಲ್ಲೆಂಗಿಪದವಿನ ಸಾಜಿದ್ ಕಾಂಪೌಂಡ್‌ನ ರೆಹ್ಮಾನ್ ಸಹೀಂ ಎಂಬವರು  ಈ ಬಗ್ಗೆ ದೂರು ನೀಡಿದ್ದು ಅದರಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೆಪ್ಟಂಬರ್ ೫ಮತ್ತು ೬ರ ನಡುವಿನ  ಸಮಯದಲ್ಲಿ ಕಳ್ಳರು ತಮ್ಮ ಮನೆಯ ಬಾಗಿಲ ಬೀಗ ಮುರಿದು ಒಳನುಗ್ಗಿ ಕೊಠಡಿಯೊಳಗಿರಿಸಲಾಗಿದ್ದ ಅಡಿಕೆ ಕಳವಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ರೆಹ್ಮಾನ್ ಸಹೀಂ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸ್ ಠಾಣೆಯ ಎಸ್‌ಐ ನಿಖಿಲ್ ಇಬ್ಬರನ್ನು ಬಂಧಿಸಿದ್ದಾರೆ. ಕಡಂಬಾರು   ಇಡಿಯಾ ನಿವಾಸಿ ಮುಸ್ತಾಕ್ ಹುಸೈನ್ (೨೨) ಮತ್ತು ಕಾಜೂರು ನಿವಾಸಿ ಅಬ್ದುಲ್ ರಶೀದ್ (೨೧) ಬಂಧಿತರಾದ ಆರೋಪಿಗಳಾಗಿದ್ದಾರೆ.

RELATED NEWS

You cannot copy contents of this page