ಮಲಪ್ಪುರಂನಲ್ಲಿ ಭೂಮಿಯಡಿಯಿಂದ ಭಾರೀ ಸದ್ದು: ಜನತೆಗೆ ಆತಂಕ

ಮಲಪ್ಪುರಂ: ಮಲಪ್ಪುರಂನ ಭೂಮಿಯಡಿಯಿಂದ ಸ್ಫೋಟಕ ಸದ್ದು ಕೇಳಿಬಂದಿರುವುದಾಗಿ ಹೇಳಲಾಗು ತ್ತಿದೆ. ಮಲಪ್ಪುರಂ ಪೋತುಕಲ್ಲ್ ಆನೆಕಲ್ಲ್ ಭಾಗದಲ್ಲಿ ನಿನ್ನೆ ರಾತ್ರಿ 9  ಗಂಟೆ ವೇಳೆ ಘಟನೆ ನಡೆದಿದೆ. ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸ್ಫೋಟಕ ಸದ್ದು ಕೇಳಿಸಿದೆ. ಶಬ್ದ ಕೇಳಿದೊಡನೆ ಜನರು ಮನೆಗಳಿಂದ ಹೊರಗೆ ಓಡಿರುವುದಾಗಿ ತಿಳಿಸಲಾಗಿ ದೆ.  ಜನತೆ ಘಟನೆ ತಕ್ಷಣ ಗ್ರಾಮಾ ಧಿಕಾರಿಗಳ ಸಹಿತ ಅಧಿಕಾರಿಗಳು ಸ್ಥಳಕ್ಕೆ ಭೆಟಿಕೊಟ್ಟಿದ್ದಾರೆ. ಘಟನೆಯಿಂದ ಕೆಲವು ಮನೆಗಳಿಗೆ ಬಿರುಕು ಉಂಟಾಗಿರುವುದಾಗಿ ತಿಳಿದುಬಂದಿದೆ. ಘಟನೆ ಸ್ಥಳಕ್ಕೆ ಇಂದು ತಜ್ಞರ ತಂಡ ತಲುಪಿ ಪರಿಶೀಲನೆ ನಡೆಸಲಿದೆ. ಈ ಹಿಂದೆ ಭೂಕುಸಿತವುಂಟಾದ ಕವಳಪ್ಪಾರ ಎಂಬ ಪ್ರದೇಶಕ್ಕೆ ಹೊಂದಿಕೊಂಡ ಸ್ಥಳದಲ್ಲಿ ನಿನ್ನೆ ರಾತ್ರಿ ಶಬ್ದ ಕೇಳಿಸಿದೆ. ಅನಿರೀಕ್ಷಿತವಾಗಿ ಉಂಟಾದ ಭಾರೀ ಸ್ಫೋಟ ಏನೆಂದು ತಿಳಿಯದೆ ಜನತೆ ಭಯಭೀತರಾಗಿದ್ದಾರೆ.

RELATED NEWS

You cannot copy contents of this page