ಮಲಯಾಳ ಸಿನೆಮಾದ ಹಿರಿಯಜ್ಜಿ ಸುಬ್ಬಲಕ್ಷ್ಮಿ ನಿಧನ
ತಿರುವನಂತಪುರ: ಮಲೆಯಾಳ ಸಿನೆಮಾದ ಹಿರಿಯಜ್ಜಿ ಎಂದೇ ಕರೆಯಲಾಗುತ್ತಿರುವ ಹಿರಿಯ ಹಾಗೂ ಬಹುಭಾಷಾ ನಟಿ ಆರ್. ಸುಬ್ಬಲಕ್ಷ್ಮಿ (೮೭) ನಿಧನ ಹೊಂದಿದರು. ಅಸೌಖ್ಯದ ನಿಮಿತ್ತ ಅವರಿಗೆ ಅವರನ್ನು ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅವರು ಮೃತಪಟ್ಟರು.
ನಂದನಂ, ಕಲ್ಯಾಣರಾಮನ್ ಸೇರಿದಂತೆ ೭೦ಕ್ಕೂ ಅಧಿಕ ಸಿನೆಮಾದಲ್ಲಿ ಸುಬ್ಬಲಕ್ಷ್ಮಿ ನಟಿಸಿದ್ದಾರೆ.
ಸಿನೆಮಾರಂಗಕ್ಕೆ ಪ್ರವೇಶಿಸುವ ಮೊದಲು ಅವರು ೯೫೧ರಲ್ಲಿ ಉತ್ತರ ದಕ್ಷಿಣ ಭಾರತದ ಬಾನುಲಿ ಕೇಂದ್ರದಲ್ಲಿ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದರು. ಹೀಗೆ ಆಕಾಶವಾಣಿ ನಿಲಯದಲ್ಲಿ ಸಂಯೋಜಕರಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ಹೆಸರಿಗೂ ಅವರು ಪಾತ್ರರಾಗಿದ್ದರು. ಇವರು ಓರ್ವೆ ಉತ್ತಮ ಸಂಗೀತಜ್ಞೆಯೂ ಆಗಿದ್ದರು. ಹಲವು ಜಾಹೀರಾತು ಗಳಲ್ಲೂ ಪ್ರತ್ಯಕ್ಷಗೊಂಡಿದ್ದಾರೆ. ಮಾತ್ರವಲ್ಲ ೬೫ಕ್ಕೂ ಹೆಚ್ಚು ದೂರದರ್ಶನದ ಧಾರಾವಾಹಿ ಗಳಲ್ಲೂ ಕಾಣಿಸಿಕೊಂಡಿದ್ದರು. ಕನ್ನಡ, ತಮಿಳು, ಹಿಂದಿ, ತೆಲುಗು ಮತ್ತು ಸಂಸ್ಕೃತ ಸಿನೆಮಾದಲ್ಲಿ ಅವರು ಅಭಿನಯಿಸಿದ್ದಾರೆ. ಕಲ್ಯಾಣ ರಾಮನ್‌ರ ಪತ್ನಿಯಾಗಿರುವ ಸುಬ್ಬಲಕ್ಷ್ಮಿಯವರು ನಟಿ ಹಾಗೂ ನೃತ್ಯಕಲಾವಿದೆಯೂ ಆಗಿರುವ ತಾರಾ ಕಲ್ಯಾಣ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.