ಮಲೆಯಾಳಂ ಚಿತ್ರೋದ್ಯಮ ಲೈಂಗಿಕ ಹಗರಣ: ತನಿಖೆಗೆ ವಿಶೇಷ ತಂಡ

ತಿರುವನಂತಪುರ: ಮಲೆಯಾಳಂ ಚಿತ್ರೋದ್ಯಮ ಈಗ ಭಾರೀ ಲೈಂಗಿಕ ಹಗರಣದಲ್ಲಿ ಸಿಲುಕಿ ಒದ್ದಾಡತೊ ಡಗಿದೆ. ಇದು ಇಬ್ಬರ ತಲೆದಂಡ ಈಗಾ ಗಲೇ ಪಡೆದಿದೆ.  ಮಲೆಯಾಳಂ ಸಿನಿಮಾ ಕಲಾವಿದರ ಸಂಘಟನೆಯಾದ ‘ಅಮ್ಮ’ದ ಪ್ರಧಾನ ಕಾರ್ಯದರ್ಶಿ ಹಿರಿಯ ನಟ ಸಿದ್ದಿಕ್ ಮತ್ತು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ, ಖ್ಯಾತ ನಿರ್ದೇಶಕ ರಂಜಿತ್‌ರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಉಂಟಾಗಿರುವ ಹಿನ್ನೆಲೆಯಲ್ಲಿ ಅವರಿಬ್ಬರು ತಮ್ಮ ಸ್ಥಾನಗಳಿಗೆ ಈಗಾ ಗಲೇ ರಾಜೀನಾಮೆ ನೀಡಿದ್ದಾರೆ.

ಮಲೆಯಾಳಂ  ಚಿತ್ರರಂಗದಲ್ಲಿ ಭಾರೀ ಲೈಂಗಿಕ ಶೋಷಣೆ ನಡೆಯುತ್ತಿದೆ ಎಂದು ಜಸ್ಟೀಸ್ ಹೇಮಾ ಸಮಿತಿಯ ವರದಿ ಹೊರಬಂದ ಬೆನ್ನಲ್ಲೇ  ಇಬ್ಬರು ನಟಿಯರು ತಮ್ಮ ಮೇಲೆ ಲೈಂಗಿಕ ಶೋಷಣೆ ನಡೆದಿದೆಯೆಂದು ಆರೋಪಿ ಸಿದ್ದಾರೆ. ಅದರ ಹೆಸರಲ್ಲಿ ರಂಜಿತ್ ಮತ್ತು ಸಿದ್ದಿಕ್ ರಾಜೀನಾಮೆ ನೀಡಿದ್ದಾರೆ. ತಮ್ಮ ಮೇಲೆ ಹೊರಿಸಲಾಗಿರುವ ಆರೋಪಗಳ ನ್ನೆಲ್ಲಾ ಇವರಿಬ್ಬರು ನಿರಾಕರಿಸಿದ್ದಾರೆ. ಸಿದ್ದಿಕ್ ವಿರುದ್ಧ ಬಂಗಾಳಿ ನಟಿ ಶ್ರೀಲೇಖಾ ಹಾಗೂ  ಮಲೆಯಾಳಂ ನಟಿಯೋರ್ವೆ   ಇಂತಹ ಲೈಂಗಿಕ ಆರೋಪ ಹೊರಿಸಿ ದ್ದಾರೆ.  ಅದರ ಬಳಿಕ ಇನ್ನೂ ಹಲವರು ನಟಿಯರು ಇಂತಹ ಆರೋಪಗಳೊಂ ದಿಗೆ ರಂಗಕ್ಕಿಳಿಯತೊಡಗಿದ್ದು, ಆದ್ದರಿಂದ ಆ ಬಗ್ಗೆ ಸಮಗ್ರ ತನಿಖೆ ನಡೆಸಲು ಸರಕಾರ ಮುಂದಾಗಿದೆ. ಇದಕ್ಕಾಗಿ ಐಜಿ ಸಫರ್‌ಜಂಗ್ ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡಕ್ಕೂ ರೂಪು ನೀಡಿದೆ. ಈ ಸಮಿತಿಗೆ ದೂರು ನೀಡಿದಲ್ಲಿ ಆ ಬಗ್ಗೆ ಸಮಗ್ರ ತನಿಖೆ  ನಡೆಸುವಂತೆ ಸರಕಾರ ನಿರ್ದೇಶ ನೀಡಿದೆ. ಇದೇ ವೇಳೆ ಅಮ್ಮಾದ ತುರ್ತು ಮಹಾಸಭೆಯನ್ನು ನಾಳೆ ಕರೆಯಲಾಗಿದ್ದು, ಅದರಲ್ಲಿ ಅಮ್ಮಾದ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಲಾಗುವುದು. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಹಿಳೆಯರನ್ನು ಆರಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You cannot copy content of this page