ಮಲ್ಲ ರಸ್ತೆ ಕುಸಿತ: ಮಾನವಗೋಡೆ ನಿರ್ಮಿಸಿ ಬಿಜೆಪಿ ಪ್ರತಿಭಟನೆ

ಬೋವಿಕ್ಕಾನ: ಭಾರೀ ಮೊತ್ತ ವ್ಯಯಿಸಿ ಅಭಿವೃದ್ಧಿಪಡಿಸಿದ ಮಲ್ಲ ರಸ್ತೆ ಕೆಲವೇ ತಿಂಗಳುಗಳೊಳಗೆ ಕುಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಳಿಯಾರು  ಪಂಚಾಯತ್ ೪೮ನೇ ಬೂತ್ ಕಮಿಟಿ ಮಾನವಗೋಡೆ ನಿರ್ಮಿಸಿ ಪ್ರತಿಭಟನೆ ವ್ಯಕ್ತಪಡಿಸಿತು. ಬಿಜೆಪಿ ಮಂಡಲ ಉಪಾಧ್ಯಕ್ಷ ಪಿ. ಜಯಕೃಷ್ಣನ್ ಉದ್ಘಾಟಿಸಿದರು. ಮನೋಜ್ ಕುಮಾರ್ ಕೊಡವಂಜಿ ಅಧ್ಯಕ್ಷತೆ ವಹಿಸಿದರು. ಮಂಡಲ ಕಾರ್ಯದರ್ಶಿ ಅನನ್ಯ, ಪಂ.ಸಮಿತಿ ಅಧ್ಯಕ್ಷ ಉಲ್ಲಾಸ್ ವೆಳ್ಳಾಲ, ಕಾರ್ಯದರ್ಶಿ ಸುಧಿ, ಜಿತೇಶ್, ಪ್ರಜಿತ್, ಕುಂಞಿ ಕೃಷ್ಣನ್, ಕರುಣಾಕರನ್, ಹರೀಶ್ ನೇತೃತ್ವ ನೀಡಿದರು.

RELATED NEWS

You cannot copy contents of this page