ಮವ್ವಾರು ಶಾಲೆಯಲ್ಲಿ ಡಿಟರ್ಜೆಂಟ್ ತಯಾರಿ ಕಾರ್ಯಾಗಾರ
ಮವ್ವಾರು: ಇಲ್ಲಿನ ಶಾಲೆಯ ವಿದ್ಯಾರ್ಥಿಗಳು ಹಾಗೂ ಮಾತೃ ಸಮಿತಿ ಸದಸ್ಯರು ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಡಿಟರ್ಜೆಂಟ್ ತಯಾರಿಸಿ ಗಮನ ಸೆಳೆದಿದ್ದಾರೆ. ಬಟ್ಟೆತೊಳೆಯುವ, ಪಾತ್ರೆ, ನೆಲಒರೆಸುವ, ಪಾಯಿಖಾನೆ ಕ್ಲೀನರ್, ಫಿನಾಯಿಲ್ಗಳನ್ನು ಶಾಲೆಯಲ್ಲಿ ತಯಾರಿಸಲಾಗಿದೆ. ಈ ಕಾರ್ಯಾಗಾರದ ಉದ್ಘಾಟನೆಯನ್ನು ಕುಂಬ್ಡಾಜೆ ಪಂ. ಅಧ್ಯಕ್ಷ ಹಮೀದ್ ಪೊಸೊಳಿಗೆ ಉದ್ಘಾಟಿಸಿದರು. ವಾರ್ಡ್ ಪ್ರತಿನಿಧಿ ಸುನಿತಾ ಜೆ ರೈ ಅಧ್ಯಕ್ಷತೆ ವಹಿಸಿದರು. ಪಿಟಿಎ ಅಧ್ಯಕ್ಷ ವಿಶ್ವನಾಥನ್ ಬಳ್ಳಪದವು, ಮುಖ್ಯೋ ಪಾಧ್ಯಾಯಿನಿ ಶ್ರೀಜಾ ಪಿ.ವಿ, ಮಾತೃಸಮಿತಿ ಅಧ್ಯಕ್ಷೆ ಬೀಫಾತಿಮ, ಸಿಡಿಎಸ್ ಚೆಯರ್ ಪರ್ಸನ್ ರೋಶಿನಿ ಶುಭಕೋರಿದರು. ಸ್ವದೇಶಿ ಗ್ರೂಪ್ ಕಾರ್ಯದರ್ಶಿ ಸತ್ಯನಾರಾ ಯಣ ನೇತೃತ್ವ ವಹಿಸಿದರು.