ಮವ್ವಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದೃಢಕಲಶ
ಮವ್ವಾರು: ಇತ್ತೀಚೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದ ಮವ್ವಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದೃಢಕಲಶ ಜರಗಿತು. ಈ ಬಗ್ಗೆ ನಡೆದ ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮೋಹನದಾಸ ಪರಮ ಹಂಸ ಸ್ವಾಮೀಜಿ ಉಪಸ್ಥಿತರಿದ್ದು, ಆಶೀರ್ವಚನ ನೀಡಿದರು. ಸಂಜೀವ ಶೆಟ್ಟಿ ಮೊಟ್ಟ ಕುಂಜ ಅಧ್ಯಕ್ಷತೆ ವಹಿಸಿದರು.
ಅನಂತ ಭಟ್ ಕುರುಮುಜ್ಜಿ, ನಾರಾಯಣ ಭಟ್, ನಾರಾಯಣ ಮಣಿಯಾಣಿ ಬೆಳ್ಳಿಗೆ, ಐತ್ತಪ್ಪ ಮವ್ವಾರು ಮಾತ ನಾಡಿದರು. ರವೀಂದ್ರ ರೈ ಗೋಸಾಡ ಸ್ವಾಗತಿಸಿ, ಕೃಷ್ಣಮೂರ್ತಿ ಎಡಪಾಡಿ ವಂದಿಸಿದರು. ವೈದಿಕ ಕಾರ್ಯಗಳಿಗೆ ಬ್ರಹ್ಮಶ್ರೀ ಶಂಕರನಾರಾಯಣ ಶರ್ಮ ಗೋಸಾಡ ಪೌರೋಹಿತ್ಯ ವಹಿಸಿದರು.