ಮಹಾರಾಷ್ಟ್ರದಲ್ಲಿ ಭೂಕಂಪ ಮನೆಯಿಂದ ಹೊರ ಓಡಿದ ಜನರು

ಮುಂಬೈ: ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಇಂದು ಬೆಳಿಗ್ಗೆ 7.14ಕ್ಕೆ ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ಈ ಮಾಹಿತಿ ನೀಡಿದೆ. ಭೂಕಂಪದಿಂದ ಭೂಮಿ ಕಂಪಿಸ ತೊಡಗಿರುವಂತೆಯೇ ಜನರು ಹೆದರಿ ತಮ್ಮ ಮನೆಗಳಿಂದ ಹೊರಕ್ಕೆ ಓಡಿದ್ದಾರೆ.  ಪರ್ಭಾನಿ ಮತ್ತು ನಾಂದೇಡ್‌ನಲ್ಲೂ ಭೂಕಂಪದ ಅನುಭವವಾಗಿದೆ. ಯಾವುದೇ  ಪ್ರಾಣ ಅಥವಾ ಆಸ್ತಿ ನಷ್ಟದ ಮಾಹಿತಿ ಲಭ್ಯವಾಗಿಲ್ಲ. ಮಾರ್ಚ್ 21ರಂದು ಕೂಡಾ ಹಿಂಗೋಲಿಯಲ್ಲಿ ಭೂಕಂಪ ಸಂಭವಿಸಿತ್ತು. ಅಂದು10 ನಿಮಿಷ ಅವಧಿಯಲ್ಲಿ ಭೂಮಿ ಕಂಪಿಸಿತ್ತು.

ಭೂಮಿಯಲ್ಲಿ ನಾಲ್ಕು ಮುಖ್ಯ ಪದರಗಳಿವೆ. ಅದನ್ನು  ಹೊರಗಿನ ಕೋರ್, ಒಳಕೋರ್, ಕ್ರಸ್ಡ ಮತ್ತು ಮ್ಯಾಂಟಿಲ್ ಎಂದು ಕರೆಯ ಲಾಗುತ್ತಿದೆ. ಈ ಫಲಕಗಳು ಭೂಮಿಯ ಕೆಳಗಡೆ ತಿರುಗುತ್ತಲೇ ಇರುತ್ತದೆ. ಈ ಫಲಕಗಳು ಒಂದೊಮ್ಮೆ ಢಿಕ್ಕಿ ಹೊಡೆದಾಗ ಭೂಮಿಯ ಅಡಿಯಲ್ಲಿ ಕಂಪನ ಉಂಟಾಗುತ್ತಿದೆ ಮತ್ತು ಫಲಕಗಳು ಜಾರಿದಾಗ ಭೂಕಂಪದ ಅನುಭವವಾಗುತ್ತಿದೆಯೆಂದು ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ.

You cannot copy contents of this page