ಮಾದಕ ಪದಾರ್ಥ ವಿರುದ್ಧ ರ್ಯಾಲಿ, ತಿಳುವಳಿಕಾ ತರಗತಿ 2ರಂದು
ಕುಂಬಳೆ: ಅಡ್ಕ ಮಾದಕ ವಿರುದ್ಧ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರಂಗವಾಗಿ ಮಾದಕ ವಿರುದ್ಧ ರ್ಯಾಲಿ, ತಿಳುವಳಿಕಾ ತರಬೇತಿ, ಸಾರ್ವಜನಿಕ ಸಮ್ಮೇಳನ ಅಕ್ಟೋಬರ್ 2ರಂದು ಅಡ್ಕ ಜಂಕ್ಷನ್ನಲ್ಲಿ ನಡೆಯ ಲಿದೆ. ಬಂದ್ಯೋಡ್ನಿಂದ ಆರಂಭಿಸುವ ರ್ಯಾಲಿಯನ್ನು ಸಂಜೆ ಮೂರು ಗಂಟೆಗೆ ಅಧ್ಯಕ್ಷ ಒ.ಕೆ. ಇಬ್ರಾಹಿಂ ಉದ್ಘಾಟಿಸು ವರು. ಸಾರ್ವಜನಿಕ ಸಮ್ಮೇಳನವನ್ನು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸುವರು. ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಿ. ಶಿಲ್ಪ ಮುಖ್ಯ ಅತಿಥಿಯಾಗಿ ರುವರು. ಅಬಕಾರಿ ಇನ್ಸ್ಪೆಕ್ಟರ್ ರಘುನಾಥ್ ಪ್ರಧಾನ ಭಾಷಣ ಮಾಡುವರು. ರಾಜಕೀಯ, ಸಾಂಸ್ಕೃತಿಕ ರಂಗದ ಹಲವರು ಭಾಗವಹಿಸುವರು ಎಂದು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಬಿ.ಎಂ.ಪಿ ಅಬ್ದುಲ್ಲ, ಉಮ್ಮರ್ ರಾಜಾವ್, ಮೊದೀನ್ ಚೆಂಗಲ್ಲ್, ಸಿ.ಎ. ಮೂಸಕುಂಞಿ, ಶಾಹುಲ್ ಹಮೀದ್, ಮೂಸ ಅಡ್ಕ ತಿಳಿಸಿದರು.