ಮಾದಕ ಪದಾರ್ಥ ಸಹಿತ ಮೂವರ ಸೆರೆ
ಕಣ್ಣೂರು: ಕೂಟುಪ್ಪುಳ ಚೆಕ್ಪೋಸ್ಟ್ ಹಾಗೂ ಕಣ್ಣೂರು ನಗರದಲ್ಲಿ ಮಾದಕ ಪದಾರ್ಥ ಬೇಟೆ ನಡೆಸಲಾಗಿದೆ. ಎರಡು ಕಿಲೋ ಗಾಂಜಾ ಹಾಗೂ 147 ಗ್ರಾಂ ಎಂಡಿಎಂಎ, 333 ಗ್ರಾಂ ಎಲ್ಎಸ್ಡಿ ಸ್ಟಾಂಪ್ ಸಹಿತ ಮೂವರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಚೆಕಪೋಸಟ್ನಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಅಜೀಬ್ ಲಬ್ಬಾರ ನೇತೃತ್ವದಲ್ಲಿ ಕಾರನ್ನು ತಡೆದು ನಿಲ್ಲಿಸಿ ನಡೆಸಿದ ತಪಾಸಣೆಯಲ್ಲಿ 52.252 ಗ್ರಾಂ ಎಂಡಿಎಂಎ, 12.90 ಗ್ರಾಂ ಗಾಂಜಾ ವಶಪಡಿಸಲಾಗಿದೆ. ಕಾರು ಪ್ರಯಾಣಿಕರಾದ ವಡಗರ ನಿವಾಸಿ ಅಮಲ್ರಾಜ್ (32), ಕುಂಞಿಪಳ್ಳ ನಿವಾಸಿ ಪಿ. ಅಜ್ಜಾಸ್ (32)ರನ್ನು ಬಂಧಿಸಲಾಗಿದೆ. ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಕಣ್ಣೂರು ನಗರದಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಪಿ.ಪಿ. ಜನಾರ್ದನನ್ ತಂಡ ನಡೆಸಿದ ದಾಳಿಯಲ್ಲಿ 2 ಕಿಲೋ ಗಾಂಜಾ, 95 ಗ್ರಾಂ ಎಂಡಿಎಂಎ, 333 ಮಿಲ್ಲಿ ಗ್ರಾಂ ಎಲ್ಎಸ್ಡಿ ಸ್ಟಾಂಪ್ ವಶಪಡಿಸಲಾಗಿದೆ. ಉತ್ತರ ಪ್ರದೇಶ ನಿವಾಸಿ ದೀಪು ಸಹಾನಿ (24)ನನ್ನು ಬಂಧಿಸಲಾಗಿದೆ. ಒಂದು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂ ದೀಪು ಸಹಾನಿ ಕಣ್ಣೂರು ನಗರ ಹಾಗೂ ಪರಿಸರ ಪ್ರದೇಶಗಳಲ್ಲಿ ಮಾದಕ ಪದಾರ್ಥ ವಿತರಿಸುವ ತಂಡದ ಪ್ರಮುಖ ಸೂತ್ರಧಾರನೆಂದು ಅಧಿಕಾರಿಗಳು ತಿಳಿಸಿದ್ದಾರೆ.