ಮಾದಕ ಮಾತ್ರೆ, ಮದ್ಯ, ಗಾಂಜಾ ಪತ್ತೆ: ರಿಕ್ಷಾ, ಬೈಕ್ ವಶ; ಇಬ್ಬರ ಸೆರೆ

ಕಾಸರಗೋಡು: ಅಬಕಾರಿ ಇಲಾ ಖೆಯ ತಂಡ ನಿನ್ನೆ ಜಿಲ್ಲೆಯ ವಿವಿಧೆ ಡೆಗಲ್ಲಾಗಿ ನಡೆಸಿದ ಕಾರ್ಯಾಚರಣೆಗ ಳಲ್ಲಿ ಮಾದಕ ಮಾತ್ರೆ, ಗಾಂಜಾ ಮತ್ತು ಮದ್ಯ ಇತ್ಯಾದಿಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಉಳಿಯತ್ತಡ್ಕದಲ್ಲಿ ಕಾಸರಗೋಡು ಅಬಕಾರಿ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ. ನೇತೃತ್ವದಲ್ಲಿ ನಿನ್ನೆ ವಾಹನ ತಪಾ ಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿ ಯಾಗಿ ಬಂದ ಆಟೋ ರಿಕ್ಷಾವೊಂದನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿ ದಾಗ ಅದರಲ್ಲಿ ೫೦ ಗ್ರಾಂ ಗಾಂಜಾ ಮತ್ತು ಅಮಲೇರಿಸಲು ಬಳಸಲಾಗುತ್ತಿರುವ ೨೧೦ ಮಾತ್ರೆಗಳು, ಒಂದು ಮೊಬೈಲ್ ಫೋನ್ ಮತ್ತಿತರ ದಾಖಲು ಪತ್ರ ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆ ವೇಳೆ ಆಟೋ ರಿಕ್ಷಾದಲ್ಲಿದ್ದ ಉಳಿ ಯತ್ತಡ್ಕ ಮಸೂದ್ ಮಂಜಿಲ್‌ನ ಮೊಹಮ್ಮದ್ ರಾಫಿ (೩೩) ಎಂಬವನು ಅಲ್ಲಿಂದ ಪರಾರಿಯಾದನೆಂದೂ, ಆದ್ದ ರಿಂದ ಆತನ ವಿರುದ್ಧ ಪ್ರಕರಣ ದಾಖ ಲಿಸಲಾಗಿದೆ. ಮಾತ್ರವಲ್ಲ, ಆಟೋ ರಿಕ್ಷಾವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಲಾದ ಮಾತ್ರೆಗಳು ವೈದ್ಯರುಗಳ ಪ್ರಿಸ್ಕ್ರಿಪ್ಶನ್ ಪ್ರಕಾರ ಮಾತ್ರ ವೇ ನೀಡಬಹುದಾದ ಮಾತ್ರೆಗಳಾಗಿವೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ವಶಪಡಿಸಲಾದ ಮಾತ್ರೆಗಳನ್ನು ಬಳಿಕ ಕಾಸರಗೋಡು ಡ್ರಗ್ ಇನ್ಸ್ ಪೆಕ್ಟರ್‌ಗೆ ಹಸ್ತಾಂತರಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಗಳಾದ ಸಿ.ಕೆ.ವಿ. ಸುರೇಶ್, ಮನೀಶ್ ಕುಮಾರ್ ಎಂ.ಪಿ., ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಬಾಬು ವಿ. ಮತ್ತು ರಾಜೇಶ್ ಪಿ. ಎಂಬವರು ಒಳಗೊಂಡಿದ್ದಾರೆ.

ಬದಿಯಡ್ಕ ಅಬಕಾರಿ ರೇಂಜ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ವಿನು ಎಚ್. ನೇತೃತ್ವದ ತಂಡ ಸ್ಟ್ರೈಕಿಂಗ್ ಫೋರ್ಸ್ ಡ್ಯೂಟಿಯಂತೆ ಕುಂಬ್ಡಾಜೆ ಬೆಳಿಂಜ ಶಾಂತಿಮೂಲೆಯಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೫.೪ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಂಬ್ಡಾಜೆ ಮಲ್ಲಾವರದ ಮಾಲಿಂಗ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮದ್ಯ ಸಾಗಿಸಲು ಬಳಸಲಾದ  ಬೈಕನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದೆ.

ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಐ.ಬಿ. ಪಿ.ಒ. ಜೇಕಬ್, ಸಿಇಒಗಳಾದ ಮನೋಜ್ ಪಿ, ಜನಾರ್ದನನ್, ಜೋಬಿ ವಿನೋದ್ ಕೆ. ಮತ್ತು ಚಾಲಕ ರಾಧಾಕೃಷ್ಣನ್ ಎಂಬವರು ಒಳಗೊಂಡಿದ್ದರು. ಇದೇ ರೀತಿ ಹೊಸದುರ್ಗ ತಾಲೂಕಿನ ಪುಲ್ಲೂರು ಕರಕ್ಕಕುಂಡ್‌ನಲ್ಲಿ ಹೊಸದುರ್ಗ ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ ಗಂಗಾಧರನ್ ಕೆ.ವಿ.ಯವರ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ೭.೫ ಲೀಟರ್ ಭಾರತೀಯ ನಿರ್ಮಿತ ವಿದೇಶ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪುಲ್ಲೂರು ನಿವಾಸಿ ಅಂಬಾಡಿ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಪಡನ್ನ ಅಲಕ್ಕಲ್ ಎಂಬಲ್ಲಿ ಹೊಸದುರ್ಗ ಅಬಕಾರಿ ರೇಂಜ್‌ನ ತಂಡ ನಡೆಸಿದ ಇನ್ನೊಂದು ಕಾರ್ಯಾ ಚರಣೆಯಲ್ಲಿ ೫೦ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. 

Leave a Reply

Your email address will not be published. Required fields are marked *

You cannot copy content of this page