ಮಾದಕದ್ರವ್ಯ ಕೈವಶವಿರಿಸಿಕೊಂಡಿದ್ದ ಬಸ್ ಪ್ರಯಾಣಿಕನ ಸೆರೆ
ಮಂಜೇಶ್ವರ: ಮಾದಕದ್ರವ್ಯ ಕೈವಶವಿರಿಸಿಕೊಂಡಿದ್ದ ಯುವಕನನ್ನು ಬಸ್‌ನಿಂದ ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದ ಎಕ್ಸೈಸ್ ಇನ್ಸ್‌ಪೆಕ್ಟರ್ ಜಿನು ಜೇಮ್ಸ್‌ರ ನೇತೃತ್ವದ ತಂಡ ಬಂಧಿಸಿದೆ.
ಕುಂಜತ್ತೂರು ಜಿಎಲ್‌ಪಿ ಶಾಲೆ ಬಳಿಯ ನಿವಾಸಿ ಹೈದರಲಿ (40) ಬಂಧಿತನಾದ ವ್ಯಕ್ತಿ. ಮಂಜೇಶ್ವರ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ನಿನ್ನೆ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನ್ನು ಪರಿಶೀಲಿಸಿದಾಗ ಅದರಲ್ಲಿದ್ದ ಹೈದರಲಿಯ ಕೈವಶ ಮಾದಕ ದ್ರವ್ಯವಾದ 136.038 ಗ್ರಾಂ ಮೆಥಾಫಿಟಮಿನ್ ಪತ್ತೆಯಾಗಿದೆ. ಅದಕ್ಕೆ ಸಂಬಂಧಿಸಿ ಆತನನ್ನು ಸೆರೆ ಹಿಡಿದು ಕೇಸು ದಾಖಲಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ (ಗ್ರೇಡ್) ಪಿ.ಕೆ. ಬಾಬುರಾಜ್, ಸಿವಿಲ್ ಎಕ್ಸೈಸ್ ಆಫೀಸರ್ ಸಜಿತ್ ಟಿ.ವಿ. ಎಂಬವರು ಒಳಗೊಂಡಿದ್ದರು.