ಮಾದಕಪದಾರ್ಥ ಮೆಥಾಫಿಟಾಮಿನ್ ಸಹಿತ ಓರ್ವ ಸೆರೆ

ಕಾಸರಗೋಡು: ಕಣ್ಣೂರು ಎಕ್ಸೈಸ್ ಎನ್‌ಫೋರ್ಸ್ ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ಇನ್‌ಸ್ಪೆಕ್ಟರ್ ಶಾಜು ಹಾಗೂ ತಂಡ ೧೩೪.೧೭೮ ಗ್ರಾಂ ಮೆತಾ ಫಿಟಾಮಿನ್ ಮಾದಕ ಪದಾರ್ಥ ವನ್ನು ವಶಪಡಿಸಿದೆ. ಪಯ್ಯಾಂ ಬಲಂ ಬೀಚ್‌ಗೆ ತೆರಳುವ   ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ ಮಾದಕಪದಾರ್ಥ ಸಾಗಾಟ ಪತ್ತೆಯಾಗಿದೆ. ಆರೋ ಪಿಗಳಾದ ಕಣ್ಣೂರ ಎಡಕ್ಕಾಡ್ ಮುಹಮ್ಮದ್ ಶರೀಫ್ ಸಿ ಎಚ್ (೩೪) ನನ್ನು ಸೆರೆಹಿಡಿಯಲಾಗಿದೆ. ಈತನ ಬೈಕ್‌ನ್ನು ವಶಪಡಿಸಲಾಗಿದೆ. ಆರೋಪಿ ಈ ಮೊದಲು ಮಾದಕಪದಾರ್ಥ ಸಾಗಾಟ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಿಂದ ಮಾದಕಪದಾರ್ಥ ತಂದು ಕಣ್ಣೂರಿನ ವಿವಿಧ  ಕಡೆಗಳಲ್ಲಿ ವಿತರಿಸುತ್ತಿರುವುದಾಗಿ ತಿಳಿದುಬಂದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

You cannot copy contents of this page