ಮಾದಕವಸ್ತು: ಡಿಜಿಪಿಯೊಂದಿಗೆ ವರದಿ ಕೇಳಿದ ರಾಜ್ಯಪಾಲ

ತಿರುವನಂತಪುರ: ರಾಜ್ಯದಲ್ಲಿ ತೀವ್ರಗೊಂಡಿರುವ ಮಾದಕವಸ್ತು ವ್ಯವಹಾರ ತಡೆಗೆ  ಕೈಗೊಂಡ ಕ್ರಮಗಳ ಕುರಿತು ಡಿಜಿಪಿ ಶೇಕ್ ದರ್ವೇಶ್ ಸಾಹೀಬ್ ಅವರೊಂದಿಗೆ ರಾಜ್ಯಪಾಲ  ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವರದಿ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಇದೀಗಿರುವ ಮಾದಕವಸ್ತುವಿನ ಪರಿಸ್ಥಿತಿ ಅದರ ವಿರುದ್ಧ ಕೈಗೊಂಡ ಕ್ರಮಗಳನ್ನು ತಿಳಿಸುವಂತೆ ನಿರ್ದೇಶಿಸಲಾಗಿದೆ.  ರಾಜ್ಯದಾದ್ಯಂತ ಆಕ್ಷನ್ ಪ್ಲಾನ್ ಸಿದ್ಧಪಡಿಸಿ ಡಿಜಿಪಿ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಿದ ಬಳಿಕ ವರದಿಯನ್ನು  ರಾಜ್ಯಪಾಲರಿಗೆ ಸಲ್ಲಿಸಲಾಗುವುದು.  ಮಾದಕವಸ್ತು ಸಂಬಂಧಿಸಿ ಕೈಗೊಂಡ ಕ್ರಮಗಳ ಕುರಿತು ಮುಖ್ಯಮಂತ್ರಿಯೊಂದಿಗೆ ರಾಜ್ಯಪಾಲರು ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

You cannot copy contents of this page