ಮಾಧ್ಯಮ ಕಾರ್ಯಕರ್ತರ ಮೇಲೆ ತಂಡದಿಂದ ಹಲ್ಲೆ: ಕೊಲೆಗೀಡಾದ ಸೌಜನ್ಯರ  ಮಾವನ ಕಾರಿಗೆ ಹಾನಿ;  ಧರ್ಮಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಕೊಲೆಗೀಡಾದ ಸೌಜನ್ಯ ಎಂಬ ಯುವತಿಯ ಮಾವ ವಿಠಲ ಗೌಡರ ವಾಹನವನ್ನು ತಂಡವೊಂದು ತಡೆದು ನಿಲ್ಲಿಸಿ  ಹಾನಿಗೊಳಿಸಿದ ಘಟನೆ ನಡೆದಿದೆ. ಧರ್ಮಸ್ಥಳ ಟ್ರಸ್ಟನ್ನು ಬೆಂಬಲಿಸುವ ವ್ಯಕ್ತಿಗಳು ವಾಹನಕ್ಕೆ ಹಾನಿಗೈದಿರುವುದಾಗಿ ದೂರಲಾಗಿದೆ. ನಿನ್ನೆ ಸಂಜೆ ನಾಲ್ವರು ಮಾಧ್ಯಮ ಕಾರ್ಯಕರ್ತರ ಮೇಲೆ ಹಲ್ಲೆಗೈದ ಘಟನೆಯ ಬೆನ್ನಲ್ಲೇ ಉಂಟಾದ ಘರ್ಷಣೆ ವೇಳೆ ವಾಹನಕ್ಕೆ ಹಾನಿಗೈಯ್ಯಲಾಗಿದೆ. ವಾಹನದ ಗಾಜುಗಳನ್ನು ಪುಡಿಗೈದು  ಸೀಟುಗಳನ್ನು ಹರಿದು ಹಾಕಿರುವುದಾಗಿ ದೂರಲಾಗಿದೆ. ಬಿಗ್‌ಬಾಸ್ ಸ್ಪರ್ಧಿ ರಜತ್ ಎಂಬವರು ಧರ್ಮಸ್ಥಳ ಗ್ರಾಮದ ಪಾಂಗಾಳದಲ್ಲಿರುವ ಸೌಜನ್ಯರ ಮನೆಗೆ  ಭೇಟಿ ನೀಡಿದ್ದರು. ಈ ಮಾಹಿತಿ ತಿಳಿದು   ಕೆಲವು ಯೂ ಟ್ಯೂಬರ್‌ಗಳು ಪಾಂಗಾಳ ರಸ್ತೆ ಬಳಿ ಸೇರಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ತಂಡ  ಅವರ ಜತೆ ವಾಗ್ವಾದ ನಡೆಸಿ ದ್ದು ಬಳಿಕ ಘರ್ಷಣೆ ಹುಟ್ಟಿಕೊಂಡಿದೆ.

 ೨೦೧೨ರಲ್ಲಿ ಧರ್ಮಸ್ಥಳದಲ್ಲಿ  ೧೭ರ ಹರೆಯದ ಸೌಜನ್ಯ ನಿಗೂಢವಾಗಿ ಕೊಲೆಗೀಡಾಗಿದ್ದಳು.  ನಿನ್ನೆಯ ಘಟನೆಯ ಬಳಿಕ ಧರ್ಮಸ್ಥಳದಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿದೆ. ಪಶ್ಚಿಮ ವಲಯ ಐಜಿ, ದಕ್ಷಿಣ ಕನ್ನಡ ಎಸ್ಪಿ    ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ. ಐದು ಬೆಟಾಲಿಯನ್ ಪೊಲೀಸರನ್ನು ಧರ್ಮಸ್ಥಳದಲ್ಲಿ ನಿಯೋಜಿಸಲಾಗಿದೆ.  ಎರಡೂ ವಿಭಾಗಗಳು ಗುಂಪುಸೇರಿ ಘರ್ಷಣೆ ನಡೆಯಲಿರುವ ಸಾಧ್ಯತೆಯನ್ನು ಮನಗಂಡು ಭದ್ರತೆ ಏರ್ಪಡಿಸಲಾಗಿದೆ.    ಪ್ರತ್ಯೇಕ ತನಿಖಾ ತಂಡ ಇಂದು ಸಭೆ ಸೇರಲಿದೆ. ಸ್ಥಳದಲ್ಲಿ ನಾಲ್ಕು ಮಂದಿ ಯೂಟ್ಯೂಬರ್‌ಗಳ ಮೇಲೆ ಹಲ್ಲೆಗೈದ ಹಾಗೂ   ಸುವರ್ಣ ನ್ಯೂಸ್ ಚ್ಯಾನೆಲ್ ವರದಿಗಾರರ ಮೇಲೆ ಹಲ್ಲೆಗೈದವರ ವಿರುದ್ದವೂ ಕೇಸು ದಾಖಲಿಸಲಾಗಿದೆ. ಇದೇ ವೇಳೆ ಮಹಿಳೆಯರ ಮೃತದೇಹಗಳನ್ನು ಧರ್ಮಸ್ಥಳದಲ್ಲಿ ಹೂತು ಹಾಕಲಾಗಿದೆಯೆಂಬ ಆರೋಪದ ಮೇರೆಗೆ ಆ ಬಗ್ಗೆ ಕುರುಹುಗಳನ್ನು ಪತ್ತೆಹಚ್ಚಲು  ಎಸ್‌ಐಟಿ ತಂಡದಿಂದ ಇಂದು ಕೂಡಾ ಪರಿಶೀಲನೆ ನಡೆಯುತ್ತಿದೆ. ದೂರುದಾರ ಸೂಚಿಸಿದ ಪ್ರಕಾರ ೧೩ನೇ ಸ್ಥಳದಲ್ಲಿ ತನಿಖಾ ತಂಡ ಇಂದು ಪರಿಶೀಲನೆ ನಡೆಸುತ್ತಿದೆ.   ಮೃತದೇಹಗಳನ್ನು ಸಾಮೂಹಿಕವಾಗಿ ಹೂತು ಹಾಕಲಾಗಿದೆಯೆಂದು ಸಾಕ್ಷಿ ಬಹಿರಂಗಪಡಿಸಿದ ಸ್ಥಳ ಇದೀಗ ಸೂಚಿಸಿದ ೧೩ನೇ ಯದ್ದಾಗಿದೆ. 30 ವರ್ಷಗಳ ಮಧ್ಯೆ  ಭಾರೀ ಪ್ರಮಾಣದಲ್ಲಿ ಮಣ್ಣು ಈ ಪ್ರದೇಶದಲ್ಲಿ ತುಂಬಿಸಲಾಗಿದೆ. ಆದ್ದರಿಂದ ಗ್ರೌಂಡ್ ಪೆನೆಟ್ರೋಟಿಂಗ್ ರಾಡಾರ್ ತಲುಪಿಸಿ ಈ ಪ್ರದೇಶದಲ್ಲಿ ಪರಿಶೋಧನೆ ನಡೆಸಲಾಗುವುದೆಂಬ ಸೂಚನೆಯಿದೆ.

Leave a Reply

Your email address will not be published. Required fields are marked *

You cannot copy content of this page