ಮಾನವ ಕಳ್ಳ ಸಾಗಾಟ ಶಂಕೆ: ೩೦೦ಕ್ಕೂ ಹೆಚ್ಚು ಭಾರತೀಯರಿದ್ದ ವಿಮಾನ ವಶ
ನವದೆಹಲಿ: ಮಾನವ ಕಳ್ಳ ಸಾಗಾಟ ಶಂಕೆಯಿಂದಾಗಿ ೩೦೦ಕ್ಕೂ ಹೆಚ್ಚು ಭಾರತೀಯ ಪ್ರಯಾಣಿಕರನ್ನು ಹೊತ್ತು ನಿಕರಾಗುವಾಗೆ ತೆರಳುತ್ತಿದ್ದ ವಿಮಾನವನ್ನು ಫ್ಸಾನ್ಸ್ನಲ್ಲಿ ವಶಕ್ಕೆ ಪಡೆಯಲಾಗಿದೆ.
ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ. ಈ ವಿಮಾನ ದುಬೈಯಿಂದ ನಿಕರಾಗುವಕ್ಕೆ ತೆರಳುತ್ತಿತ್ತು. ಅದರಲ್ಲಿ ಒಟ್ಟು ೩೦೩ ಪ್ರಯಾಣಿಕರಿದ್ದರು. ಇವರೆಲ್ಲಾ ಬಹುಪಾಲು ಮಂದಿ ಭಾರತೀಯರೇ ಆಗಿದ್ದಾರೆ. ಇದೇ ವೇಳೆ ವಿಮಾನದಲ್ಲಿ ಮಾನವ ಕಳ್ಳತಪಾಸಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಅದರಂತೆ ಆ ವಿಮಾನಕ್ಕೆ ಫ್ರೆಂಚ್ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ನಿಲುಗಡೆ ನೀಡಿ ಅದರಲ್ಲಿದ್ದ ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಫ್ರೆಂಚ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾವು ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಪ್ರಯಾಣಿಕರ ಯೋಗಕ್ಷೇಮವನ್ನು ವಿಚಾರಿಸಲಾಗು ತ್ತಿದೆ ಎಂದು ಅವರು ಹೇಳಿದ್ದಾರೆ.
೩೦೩ ಭಾರತೀಯರನ್ನು ವಿಮಾನದಲ್ಲಿ ಕಳ್ಳ ಸಾಗಾಟ ನಡೆಸಲಾಗುತ್ತಿದೆ ಎಂಬ ಅನಾಮಧೇಯ ಸಂದೇಶ ನಮಗೆ ಲಭಿಸಿದೆ. ಅದರಂತೆ ವಿಮಾನವನ್ನು ತಡೆದು ನಿಲ್ಲಿಸಿ ಅದರಲ್ಲಿದ್ದವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಫ್ರಂಚ್ ಅಧಿಕಾರಿಗಳು ಹೇಳಿದ್ದಾರೆ. ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ನಿಕರಾಗುವಾಕ್ಕೆ ಪ್ರಯಾಣ ಆರಂಭಿಸಿತ್ತು. ವಿಮಾನ ಕಳ್ಳಸಾಗಾಟ ಬಗ್ಗೆ ಫ್ರೆಂಚ್ ಸರಕಾರ ಮಾತ್ರವಲ್ಲ ಭಾರತ ಸರಕಾರವೂ ಇನ್ನೊಂದೆಡೆ ಸಮಗ್ರ ತನಿಖೆ ಆರಂಭಿಸಿದೆ.