ಮಾರಾಟಕ್ಕಾಗಿ ತರಲಾದ ಎಂ.ಡಿ.ಎಂ.ಎ ಸಹಿತ ಇಬ್ಬರ ಸೆರೆ, ಕಾರು ವಶ
ಕಾಸರಗೋಡು: ಮಾರಾ ಟಕ್ಕಾಗಿ ಪಯ್ಯನ್ನೂರಿನಿಂದ ಕಾಸರಗೋಡಿಗೆ ತರಲಾಗಿದ್ದ ಎಂಡಿಎಂಎ ಮಾದಕ ದ್ರವ್ಯದೊಂದಿಗೆ ಇಬ್ಬರನ್ನು ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ.ರ ನೇತೃತ್ವದ ತಂಡ ನಗರದ ನುಳ್ಳಿಪ್ಪಾಡಿಯಿಂದ ಬಂಧಿಸಿದೆ. ಬಂಧಿತರ ಕೈವಶವಿದ್ದ ೦.೮ ಗ್ರಾಂ ಎಂಡಿಎಂಎ ಮತ್ತು ಅವರು ಬಂದ ಕಾರನ್ನೂ ಅಬಕಾರಿ ತಂಡ ವಶಪಡಿಸಿದೆ.
ತಳಿಪರಂಬ ಎಳಿಲೋಟ್‌ನ ಅಬ್ದುಲ್ಲ ಸಿ.ಟಿ. (೪೬) ಮತ್ತು ಹೊಸದುರ್ಗ ಎಡಚಾಕೈ ನಿವಾಸಿ ಫೈಝಲ್ (೩೭) ಬಂಧಿತರಾದ ಆರೋಪಿಗಳು. ಇವರ ವಿರುದ್ಧ ಎನ್‌ಡಿಪಿಎಸ್ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪಯ್ಯನ್ನೂರಿನಿಂದ ಮಾರಾಟಕ್ಕಾಗಿ ಕಾಸರಗೋಡಿಗೆ ಮಾದಕ ದ್ರವ್ಯ ತರಲಾಗುತ್ತಿದೆ ಎಂಬ ಗುಪ್ತ ಮಾಹಿತಿ ನಮಗೆ ಲಭಿಸಿತ್ತು. ಅದರ ಆಧಾರದಲ್ಲಿ ನುಳ್ಳಿಪ್ಪಾಡಿ ಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಬಕಾರಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ರಾಜೇಶ್ ಪಿ, ಮುರಳೀಧರನ್ ಎಂ. ಮತ್ತು ಶರತ್ ಕೆ.ಪಿ. ಎಂಬವರು ಒಳಗೊಂಡಿದ್ದರು.