ಮಾರ್ಚ್ 24, 25ರಂದು ಬ್ಯಾಂಕ್ ನೌಕರರ ಮುಷ್ಕರ
ಹೊಸದಿಲ್ಲಿ: ಬ್ಯಾಂಕ್ಗಳ ಚಟುವಟಿಕೆಯನ್ನು ವಾರದಲ್ಲಿ ಐದು ದಿನಗಳಾಗಿ ನಿಗದಿಪಡಿಸಬೇಕೆಂದು ಒತ್ತಾಯಿಸಿ ಮಾರ್ಚ್ 24 ಹಾಗೂ 25ರಂದು ದೇಶಾದ್ಯಂತ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. ಬೆಫಿ, ಎಐಬಿಇಎ, ಎಐಟಿಒಸಿ, ಎನ್ಸಿಬಿಇ ಸಹಿತ 9 ಸಂಘಟನೆಗಳ ಸಂಯುಕ್ತ ಸಂಘಟನೆಯಾದ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್ಬಿಯು) ಮುಷ್ಕರಕ್ಕೆ ನೇತೃತ್ವ ನೀಡಲಿದೆ. ಮಾರ್ಚ್ ೩ರಂದು ಪಾರ್ಲಿಮೆಂಟ್ ಮಾರ್ಚ್, 11ರಂದು ಬ್ಯಾಂಕ್ನ ಕೇಂದ್ರ ಕಚೇರಿ ಮುಂದೆ ಧರಣಿ ನಡೆಯಲಿರುವುದು.