ಮಾವೋವಾದಿ ನೇತಾರನ ಮನೆಗೆ ಎನ್‌ಐಎ ದಾಳಿ
ಕೊಚ್ಚಿ: ಮಾವೋವಾದಿ ನೇತಾರ ಮುರಳಿ ಕಣ್ಣಂಬಿಳ್ಳಿಯ ತೆವೈಕಲ್ ನಲ್ಲಿರುವ ಮನೆಗೆ ಎನ್‌ಐಎ ದಾಳಿ ನಡೆಸಿದೆ. ಹೈದರಾಬಾದ್ ನಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿ 8 ಮಂದಿ ಎನ್‌ಐಎ ಅಧಿಕಾರಿಗಳು ತಪಾಸಣೆಗಾಗಿ ತಲುಪಿದ್ದಾರೆ. ಬಾಗಿಲು ಮುರಿದು ಎನ್‌ಐಎ ತಂಡ ಮನೆಯೊಳಗೆ ನುಗ್ಗಿ ತಪಾಸಣೆ ನಡೆಸಿದೆ. ಮುರಳಿ ಈ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವುದಾಗಿ ತಿಳಿದುಬಂದಿದೆ. ನಾಲ್ಕು ವರ್ಷ ಕಾಲ ಪುಣೆ ಎರುವಾಡ ಜೈಲಿನಲ್ಲಿದ್ದ ಮುರಳಿ ಕಣ್ಣಂಬಿಳ್ಳಿ 2019ರಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದನು. ಕೊಚ್ಚಿ ಇರುಂಬನಂ ನಿವಾಸಿಯಾದ ಮುರಳಿ 1976ರಲ್ಲಿ ಕಾಯಣ್ಣ ಪೊಲೀಸ್ ಠಾಣೆ ಮೇಲೆ ಆಕ್ರಮಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದನು.