ಮೀಂಜ, ಪೈವಳಿಕೆಯಲ್ಲಿ ಹರಡುತ್ತಿದೆ ಹಳದಿಕಾಮಾಲೆ: ೫೪ ಮಂದಿಯಲ್ಲಿ ರೋಗ ಪತ್ತೆ: ತಜ್ಞರ ತಂಡ ಇಂದು ಆಗಮನ
ಮಂಜೇಶ್ವರ: ಮೀಂಜ ಮತ್ತು ಪೈವಳಿಕೆ ಪಂಚಾಯತ್ಗೊಳಪಟ್ಟ ಹಲವು ಪ್ರದೇಶಗಳಲ್ಲಿ ಹಳದಿ ಕಾಮಾಲೆ ಹರಡುತ್ತಿದ್ದು, ಮಕ್ಕಳೂ ಸೇರಿದಂತೆ ೫೪ ಮಂದಿಯಲ್ಲಿ ಈ ಕಾಯಿಲೆ ದೃಢೀಕರಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಎರಡೂ ಪಂಚಾಯತ್ಗಳ ಲ್ಲಿರುವ ಸರಕಾರಿ ಆರೋಗ್ಯ ಕೇಂದ್ರ ಗಳಲ್ಲಿ ಅಗತ್ಯದಷ್ಟು ವೈದ್ಯರುಗಳಾಗಲೀ, ಇತರ ಸಿಬ್ಬಂದಿಗಳಾಗಲೀ ಇಲ್ಲ. ಆದುದರಿಂದ ಚಿಕಿತ್ಸೆಗಾಗಿ ದುಂದುವೆಚ್ಚ ಮಾಡಿ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸಬೇಕಾದ ಸ್ಥಿತಿ ನಿರ್ಮಾ ಣವಾಗಿದೆ ಎಂದು ಈ ಪ್ರದೇಶದ ಜನರು ಹೇಳುತ್ತಿದ್ದಾರೆ. ಬಾಯಾರು ಕುಟುಂಬ ಆರೋಗ್ಯ ಕೇಂದ್ರದಲ್ಲಂತೂ ವೈದ್ಯರಿಲ್ಲ. ಇಲ್ಲಿ ಈ ಹಿಂದೆ ಮೂವರು ವೈದ್ಯರಿದ್ದರು. ಅದರಲ್ಲಿ ಇಬ್ಬರು ಬೇರೆಡೆಗೆ ವರ್ಗಾವಣೆಗೊಂಡಿದ್ದಾರೆ. ಇನ್ನೋರ್ವ ವೈದ್ಯ ಈಗ ವೈದ್ಯಕೀಯ ರಜೆಯಲ್ಲಿ ದ್ದಾರೆಂದು ಊರವರು ತಿಳಿಸಿದ್ದಾರೆ.
ಮೀಂಜ, ಪುತ್ತಿಗೆ, ಕುರುಡಪದವು, ಮುಳಿಗದ್ದೆ, ಬಾಯಾರು, ಪೆರ್ಮುದೆ ಎಂಬೆಡೆಗಳಲ್ಲಿ ಹಳದಿ ಕಾಮಾಲೆಯಿಂದ ೫೦ಕ್ಕೂ ಅಧಿಕ ಮಂದಿ ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ವೈದ್ಯರಾ ಗಲೀ, ಅಗತ್ಯದ ಸಿಬ್ಬಂದಿಗಲಾಗಲೀ ಇಲ್ಲದ ಕಾರಣದಿಂದ ಇವರಿಗೆಲ್ಲಾ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯನ್ನು ಆಶ್ರಯಿಸಬೇಕಾಗಿ ಬಂದಿದೆ. ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯದಷ್ಟು ವೈದ್ಯರು ಮತ್ತು ಇತರ ಸಿಬ್ಬಂದಿಗಳನ್ನು ನೇಮಿಸಬೇಕೆಂದು ಊರವರು ಆಗ್ರಹಪಟ್ಟಿದ್ದಾರೆ. ಹಳದಿ ಕಾಮಾಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಅಗತ್ಯದ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆರೋಗ್ಯ ತಜ್ಞರನ್ನು ಈ ಪ್ರದೇಶಗಳಿಗೆ ಕಳಹಿಸಿಕೊಡಲು ಆರೋಗ್ಯ ಇಲಾಖೆ ನಿರ್ದೇಶ ನೀಡಿದೆ. ಅದರಂತೆ ಈ ತಂಡ ಇಂದು ಆಗಮಿಸಲಿದೆ.
ಪೈವಳಿಕೆಯಲ್ಲಿ ೩೯ ಮತ್ತು ಮೀಂಜದಲ್ಲಿ ೧೫ ಮಂದಿಯಲ್ಲಿ ಹಳದಿ ಕಾಮಾಲೆ ಪತ್ತೆಯಾಗಿದೆಯೆಂದೂ ಅದರಿಂದ ಜನರು ಅತೀವ ಜಾಗ್ರತೆ ಪಾಲಿಸಬೇಕೆಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎಂ. ರಾಮದಾಸ್ ತಿಳಿಸಿದ್ದಾರೆ. ರೋಗ ಪ್ರತಿರೋಧಕ ಕ್ರಮಗಳನ್ನು ತೀವ್ರಗೊಳಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.
ಹೈಪರೈಟೀಸ್ ಎ (ಎಚ್ಎಎ) ವೈರಸ್ ಈ ರೋಗ ಹರಡಲು ಕಾರಣ ವಾಗಿದೆ. ಮಲಿನಜಲ, ಆಹಾರ ಇತ್ಯಾದಿಗಳ ಮೂಲಕ ಇದು ಹರ ಡುತ್ತಿದೆ. ಇಂತಹ ರೋಗಾಣುಗಳು ಮಾನವ ಶರೀರದೊಳಗೆ ಪ್ರವೇಶಿಸಿದ ಬಳಿಕ ಎರಡರಿಂದ ಆರು ವಾರದೊಳಗೆ ಅವರಿಗೆ ರೋಗ ಲಕ್ಷಣಗಳು ಗೋಚರಿಸುತ್ತವೆ. ಈ ರೋಗ ಎರಡರಿಂದ ೧೨ ವಾರಗಳ ತನಕ ಮುಂದುವರಿಯಲಿದೆಯೆಂದು ಅವರು ತಿಳಿಸಿದ್ದಾರೆ.