ಮೀಂಜ ಬಂಟರ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ನಾಳೆ

ಮೀಯಪದವು: ಬಂಟರ ಸಂಘ ಮೀಂಜ ಇದರ ಆಶ್ರಯದಲ್ಲಿ ಬಂಟರ ಸಂಘ ಬೆಂಗಳೂರು ಇದರ ಸಹಯೋಗದೊಂದಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪಿ.ಯು.ಸಿ, ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಮಾರಂಭ ನಾಳೆ ಅಪರಾಹ್ನ 3.30ಕ್ಕೆ ಮೀಯಪದವು ಬಂಟರ ಸಂಘ ಕಚೇರಿಯಲ್ಲಿ ಜರಗಲಿದೆ. ಉದ್ಯಮಿ ಸದಾಶಿವ ಕೆ. ಶೆಟ್ಟಿ ಕುಳೂರು ಕನ್ಯಾನ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡುವರು. ಬಂಟರ ಸಂಘ ಮೀಂಜ ಘಟಕ ಅಧ್ಯಕ್ಷ ಜಗದೀಶ್ ಶೆಟ್ಟಿ ಎಲಿಯಾಣ ಅಧ್ಯಕ್ಷತೆ ವಹಿಸುವರು. ಸದಾನಂದ ಸುಲಾಯ, ಪಂಜಾಯತ್ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ಧರ್ಮೆಮಾರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ದಾಸಣ್ಣ ಆಳ್ವ ಕುಳೂರುಬೀಡು, ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ, ಕೆ. ನಾರಾಯಣ ನಾಕ್ ನಡುಹಿತ್ಲು, ಸತೀಶ ಅಡಪ ಸಂಕಬೈಲು, ಕಾರ್ತಿಕ್ ಶೆಟ್ಟಿ ಮಜಿಬೈಲು ಉಪಸ್ಥಿತರಿರುವರು.

You cannot copy contents of this page