ಮುಂದಿನ ವರ್ಷ ಜಿಲ್ಲೆಗೆ ಬಿ.ಎಸ್.ಎನ್.ಎಲ್. ‘5-ಜಿ’ ಸೇವೆ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 2025ರಲ್ಲಿ 5-ಜಿ ಸಂಪರ್ಕ ಸೇವೆ ಆರಂಭಿಸಲಾಗು ವುದೆಂದು ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್ ಎಲ್) ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗ ೪-ಜಿ ಸಂಪರ್ಕ ಸೇವೆಗಿರುವ ಕ್ರಮ ಆರಂಭಿಸಲಾಗಿದೆ. ಈ ಯೋಜನೆ ಪೂರ್ಣಗೊಂಡ ನಂತರ ಜಿಲ್ಲೆಯಲ್ಲಿ ೫-ಜಿ ಸಂಪರ್ಕ ಸೇವೆ ಆರಂಭಿಸಲಾಗುವುದು. ಖಾಸಗಿ ಟೆಲಿಕಾಂ ಸಂಸ್ಥೆಗಳು ತಾರೀಫ್ ದರವನ್ನು ಪದೇ ಪದೇ ಹೆಚ್ಚಿಸುತ್ತಿದೆ. ಇದರ ಬೆನ್ನಲ್ಲೇ ಬಿಎಸ್‌ಎನ್‌ಎಲ್ ಸಂಪರ್ಕವನ್ನು ಇನ್ನಷ್ಟು ಹೆಚ್ಚು ಮಂದಿ ಪಡೆಯತೊ ಡಗಿದ್ದಾರೆ. ಇದು ಬಿಎಸ್‌ಎನ್‌ಎಲ್‌ಗೆ ಹೊಸ ಉತ್ತೇಜನ ನೀಡತೊಡಗಿದೆ. ಇದರ ಜತೆಗೆ ಬಿಎಸ್‌ಎನ್‌ಎಲ್ ೪-ಜಿ ಮತ್ತು ೫-ಜಿ ಸಂಪರ್ಕ ಸೇವೆಯನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಲಾ ರಂಭಿಸಿದಲ್ಲಿ ಇದು ತಮ್ಮ ಹಳೇ ಪ್ರತಾಪವನ್ನು ಮತ್ತೆ ಮೈಗೂಡಿಸಿಕೊ ಳ್ಳುವಂತೆ ಮಾಡಲು ಬಿಎಸ್‌ಎನ್ ಎಲ್‌ಗೆ ಸಹಾಯಕವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page