ಮುಂದುವರಿದ ಕಡಲ್ಕೊರೆತ: ಐಲ ಬಂಗ್ಲದಲ್ಲಿ ಮೀನುಗಾರರ ಬಲೆ ಸಂಗ್ರಹ ಶೆಡ್ ಸಮುದ್ರಪಾಲಾಗುವ ಬೀತಿ

ಉಪ್ಪಳ: ಕಡಲ್ಕೊರೆತ ವ್ಯಾಪಕವಾಗಿ ಮುಂದುವರಿಯುತ್ತಿದ್ದು, ಉಪ್ಪಳ ಬಳಿಯ ಐಲ ಬಂಗ್ಲ ಎಂಬಲ್ಲಿ ಮೀನುಗಾರಿಕೆಯ ಬಲೆಗಳನ್ನು ಸಂಗ್ರಹಿಸಿಡುವ ಶೆಡ್ ಸಮುದ್ರಪಾಲಾಗುವ ಭೀತಿ ಇದೆ. ಹಲವಾರು ಗಾಳಿ ಮರಗಳು ನೀರುಪಾಲಿಗಿದೆ. ಬಲೆಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇದರಿಂದ ಮೀನುಗಾರರು ಆತಂಕಕ್ಕೊಗಾಗಿದ್ದಾರೆ. ಕಳೆದ ಹಲವು ದಿನಗಳಿಂದ ಈ ಪ್ರದೇಶದಲ್ಲಿ ಸಮುದ್ರ ಅಲೆಗಳ ಆರ್ಭಟ ಹೆಚ್ಚಾಗತೊಡಗಿದ್ದು, ಇದರಿಂದ ಮೀನುಗಾರರು ಸಂಗ್ರಹಿಸಿಡುತ್ತಿದ್ದ ಕಾಂಕ್ರೀಡ್ ಶೆಡ್ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ಕಳೆದ ಏಳು ವರ್ಷಗಳ ಹಿಂದೆ ಮೀನು ಕಾರ್ಮಿಕರಿಗೆ ಪಂಚಾಯತ್  ವತಿಯಿಂದ ನಿರ್ಮಿಸಲಾದ ಶೆಡ್ ಇದಾಗಿದೆ. ಇಲ್ಲಿನ ರಸ್ತೆ ಕೂಡಾ ಅಪಾಯದಂಚಿನಲ್ಲಿದೆ. ಹನುಮಾನ್ ನಗರ, ಮೂಸೋಡಿ, ಶಾರದಾನಗರದಲ್ಲೂ ಕಡಲ್ಕೊರೆತ ಮುಂದುವರಿಯುತ್ತಿದೆ.

You cannot copy contents of this page