ಮುಂಬೈದಾಳಿಯ ಮಾಸ್ಟರ್ ಮೈಂಡ್ ತಹವೂರ್ ರಾಣಾ ಇಂದು ಭಾರತಕ್ಕೆ
ದೆಹಲಿ: 2008 ನವಂಬರ್ 26ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯ ರೂವಾರಿ ಪಾಕ್ ಮೂಲದ ನಿವಾಸಿ ಹಾಗೂ ಕೆನಡಾ ಪ್ರಜೆಯಾಗಿರುವ ತಹವೂರ್ ರಾಣಾನನ್ನು ಇಂದು ಅಮೆರಿಕಾದಿಂದ ಭಾರತಕ್ಕೆ ತರಲಾಗುವುದು. ಆ ಹಿನ್ನೆಲೆಯಲ್ಲಿ ದೆಹಲಿ, ಮುಂಬೈ ಸೇರಿದಂತೆ ದೇಶದ ಹಲವೆಡೆಗಳಲ್ಲಿ ಬಿಗಿ ಬಂದೋಬಸ್ತ್ ಹಾಗೂ ಕಟ್ಟೆಚ್ಚರ ಪಾಲಿಸಲಾಗುತ್ತಿದೆ.
ತಹಾವೂರ್ ರಾಣಾ ಈಗ ಅಮೇರಿಕಾದ ಜೈಲಿನಲ್ಲಿದ್ದು, ಪ್ರಧಾನಮಂತ್ರಿ ಮೋದಿ ಮಾಡಿಕೊಂಡ ಮನವಿಯಂತೆ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದರು. ಅದಕ್ಕೆ ಯುಎಸ್‌ನ ಸರ್ವೋಚ್ಛ ನ್ಯಾಯಾಲಯವೂ ಅನುಮತಿ ನೀಡಿದೆ. ಅದರಂತೆ ಆತನನ್ನು ಇಂದು ಭಾರತಕ್ಕೆ ತರುವ ಪ್ರಕ್ರಿಯೆ ಆರಂಭಿಸಿದೆ.
ಎನ್‌ಐಎ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು ಭಾರತಕ್ಕೆ ತರಲಾಗುವ ರಾಣಾನನ್ನು ಮುಂಬೈಯ ಎರಡು ಮತ್ತು ದೆಹಲಿಯ ಎರಡು ಜೈಲುಗಳಲ್ಲಿ ಕೂಡಿ ಹಾಕುವ ವಿಶೇಷ ವ್ಯವಸ್ಥೆಗಳನ್ನೂ ಮಾಡಲಾಗಿದೆ.