ಮುಂಬೈಯಿಂದ ಬರುತ್ತಿದ್ದ ತಳಂಗರೆ ನಿವಾಸಿ ರೈಲಿನಲ್ಲಿ ಸಾವು
ಕಾಸರಗೋಡು: ವ್ಯಾಪಾರದ ಅಗತ್ಯಕ್ಕಾಗಿ ಮುಂಬೈಗೆ ಹೋಗಿ ಅಲ್ಲಿಂದ ಹಿಂತಿರುಗುತ್ತಿದ್ದ ತಳಂಗರೆ ನಿವಾಸಿ ರೈಲಿನಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ತಳಂಗರೆ ನಿವಾಸಿ ಹಾಗೂ ಈಗ ಪೂಚಕ್ಕಾಡ್‌ನಲ್ಲಿ ವಾಸಿಸುತ್ತಿರುವ ಮುಹಮ್ಮದ್ ಹಬೀಬುಲ್ಲಾ (69) ಸಾವನ್ನಪ್ಪಿದ ವ್ಯಕ್ತಿ. ಇವರು ಮುಂಬೈಯಿಂದ ಗರೀಬ್ ರಥ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಊರಿಗೆ ಹಿಂತಿರುತ್ತಿದ್ದ ದಾರಿ ಮಧ್ಯೆ ರತ್ನಗಿರಿಗೆ ತಲುಪಿದಾಗ ರೈಲಿನೊಳಗೆ ದಿಢೀರ್ ಆಗಿ ಕುಸಿದು ಸಾವನ್ನಪ್ಪಿದ್ದಾರೆ. ಹೃದಯಾಘಾತವೇ ಸಾವಿಗೆ ಕಾರಣವಾಗಿದೆಯೆಂದು ತಿಳಿಸಲಾಗಿದೆ.
ಮೃತರು ಪತ್ನಿ ಆಯಿಷಾ ತುರ್ತಿ, ಮಕ್ಕಳಾದ ಶಮೀಮಾ ಸಿದ್ದಿಕ್, ಲುಯುನಾ, ಸರ್ಫೀನಾ, ಶಹದಾತ್, ಟಿಪ್ಪು,ಅಳಿಯಂದಿರಾದ ಮೊಯ್ದೀನ್, ಮುಹಿಯುದ್ದೀನ್, ರಹೀಂ, ಸಹೋ ದರ-ಸಹೋದರಿ ಯರಾದ ಅಬ್ದುಲ್‌ಖಾದರ್, ಯೂಸುಫ್, ಬುಶ್ರಾ ಮರಿಯಾಂಬಿ, ಉಮೈಬಾ, ಫಾತಿಮಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.