ಮುಖ್ಯಮಂತ್ರಿಯ ಕ್ರಿಸ್ಮಸ್, ಹೊಸವರ್ಷದ ಔತಣಕೂಟ ಜ.೩ರಂದು: ರಾಜ್ಯಪಾಲರಿಗಿಲ್ಲ ಆಹ್ವಾನ
ತಿರುವನಂತಪುರ: ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಸಲುವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜನವರಿ ೩ರಂದು ಮಧ್ಯಾಹ್ನ ತಿರುವನಂತಪುರ ಮಸ್ಕತ್ ಹೋಟೆ ಲ್‌ನಲ್ಲಿ ಸಮಾಜದ ಗಣ್ಯರಿಗಾಗಿ ವಿಶೇ ಷ ಔತಣಕೂಟ ಏರ್ಪಡಿಸಿದ್ದಾರೆ. ಕಳದ ವರ್ಷವೂ ಇದೇ ರೀತಿ ಔತಣ ಕೂಟ ಏರ್ಪಡಿಸಲಾಗಿತ್ತು. ಆದರೆ ಈ ವರ್ಷದ ಔತಣ ಕೂಟಕ್ಕೆ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್‌ರಿಗೆ ಆಹ್ವಾನ ನೀಡಲಾಗಿಲ್ಲ. ಈ ಔತಣ ಕೂಟ ಏರ್ಪಡಿಸಿದ ದಿನದಂದು ರಾಜ್ಯಪಾಲರು ಇತರ ಯಾ ವುದೇ ಕಾರ್ಯಕ್ರಮವನ್ನೂ ಹೊಂ ದಿಲ್ಲ. ಅವರು ಅಂದು ತಿರುವನಂ ತಪುರದಲ್ಲೇ ಇರುವರು. ಮುಖ್ಯಮಂತ್ರಿಯವರು ಕಳೆದ ವರ್ಷ ಏರ್ಪಡಿಸಿದ ಇಂತಹ ಔತಣ ಕೂಟಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ದರೂ ರಾಜ್ಯಪಾಲರು ಅದರಲ್ಲಿ ಭಾಗವಹಿಸಿರಲಿಲ್ಲ. ಇನ್ನೊಂದೆಡೆ ರಾಜ್ಯಪಾಲರೂ ಕ್ರಿಸ್ಮಸ್ ಔತಣ ಕೂಟ ಏರ್ಪಡಿಸಿದ್ದು, ಅದರಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಮತ್ತು ಇತರ ಎಲ್ಲಾ ಸಚಿವರುಗಳಿಗೂ ಆಹ್ವಾನ ನೀಡಲಾಗಿದೆ.