ಮಂಜೇಶ್ವರ: ಕಾಸರಗೋಡು ನಾಯಮ್ಮಾರಮೂಲೆ ಬಳಿಯ ಮುಟ್ಟತ್ತೋಡಿ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಮೊಹಮ್ಮದ್ ಅನೀಫ್ (42) ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೊಹ ಮ್ಮದ್ ಅನೀಫ್ರ ಸಹೋದರಿ ಸಣ್ಣಡ್ಕ ನಿವಾಸಿ ಅಪ್ಸ ಅಬೂಬಕರ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೊಹಮ್ಮದ್ ಅನೀಫ್ ಸಹೋದರಿ ಅಪ್ಸ ಅಬೂಬಕರ್ರ ಮನೆಗೆ ಇತ್ತೀಚೆಗೆ ಬಂದಿದ್ದು, ಬಳಿಕ ಜುಲೈ 31ರಂದು ಮಂಗಳೂರಿನಲ್ಲಿ ಕೆಲಸಕ್ಕೆಂದು ತೆರಳಿದ್ದಾರೆ. ಆದರೆ ಅನಂತರ ಅವರು ನಾಪತ್ತೆಯಾಗಿದ್ದು, ವಿವಿಧೆಡೆ ಹುಡುಕಾಡಿದರೂ ಪತ್ತೆಹಚ್ಚಲಾಗಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.
