ಮುಳಿಂಜ ಶಿವತೀರ್ಥಪದವು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಉಪ್ಪಳ: ಸಾರ್ವಜನಿಕ ಶ್ರೀ ಗಣೇ ಶೋತ್ಸವ ಸಮಿತಿ ಶಿವತೀರ್ಥಪದವು ಮುಳಿಂಜ ಉಪ್ಪಳ ಇದರ ಆಶ್ರಯದಲ್ಲಿ ನಡೆಯುವ 45 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಗಣೇಶ್ ಮಂದಿರದಲ್ಲಿ ನಡೆಯಿತು. ಸಮಿತಿ ಗೌರವ ಅಧ್ಯಕ್ಷ ಜಯರಾಮ ಶೆಟ್ಟಿ ಕಡಂಬಾರ್, ಸಮಿತಿ ಅಧ್ಯಕ್ಷÀ ಹರೀನಾಥ್ ಭಂಡಾರಿ ಮುಳಿಂಜ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕೊರಿಕ್ಕಾರ್ ಮತ್ತು ಸಮಿತಿ ಕೋಶಾಧಿಕಾರಿ ತಿಮ್ಮಪ ಶೆಟ್ಟಿ ದಡ್ಡಂಗಡಿ ಉಪಸ್ಥಿತರಿದ್ದರು. ದಿನೇಶ್ ಮುಳಿಂಜ ಸ್ವಾಗತಿಸಿ ರವೀಂದ್ರ ಶೆಟ್ಟಿ ಗುಡ್ಡೆಮಾರ್ ವಂದಿಸಿದರು.