ಮುಳಿಗದ್ದೆ ಪೆರ್ವೋಡಿ ಸಮೀಪ ರಸ್ತೆ ಕುಸಿದು ಬಿದ್ದು ಅಪಾಯದಂಚಿನಲ್ಲಿ: ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಪೈವಳಿಕೆ: ಮುಳಿಗದ್ದೆ- ಬೆರಿ ಪದವು ಬಳ್ಳೂರು ರಸ್ತೆಯ ಪೆರ್ವೋಡಿ ಬಳಿ ರಸ್ತೆ ಕುಸಿದು ಬಿದ್ದು ಅಪಾಯದ ಸ್ಥಿತಿಯಲ್ಲಿರುವ ಸ್ಥಳಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಸಹಿತ ಇತರ ಉದ್ಯೋ ಗಸ್ಥರು ಭೇಟಿ ನೀಡಿ ಪರಿಶೀಲಿ ಸಿದ್ದಾರೆ. ಮಳೆಯ ಆರಂಭದಲ್ಲೇ ರಸ್ತೆ ಕುಸಿದು ಬಿದ್ದಿದೆ ಮಾತ್ರವಲ್ಲ ಪರಿಸರದಲ್ಲಿ ನೀರು ತುಂಬಿದ ಕೆರೆ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಪೈವಳಿಕೆ ಪಂಚಾಯತ್ ಸದಸ್ಯೆ ಜಯಲಕ್ಷಿ÷್ಮ ಭಟ್ ಸಹಿತ ಸ್ಥಳೀಯರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ದುರಸ್ತಿತಿಗೆ ಕ್ರಮ ಉಂಟಾಗಿರಲಿಲ್ಲ. ಮಂಗಳವಾರ ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಬಾಯಾರು ವಿಲೇಜ್ ಆಫೀಸ್ ಸಂದರ್ಶಿಸಿದ ವೇಳೆ ಪಂಚಾಯತ್ ಸದಸ್ಯೆ ಜಯಲಕ್ಷಿ÷್ಮ ಭಟ್‌ರವರ ನೇತೃತ್ವದಲ್ಲಿ ಸ್ಥಳ ಸಂದ ರ್ಶಿಸಿ ಅಪಾಯದಲ್ಲಿರುವ ರಸ್ತೆಯ ದುರಸ್ತಿಗೆ ಲೋಕೋಪಯೋಗಿ ಇಲಾಖೆಗೆ ಅದೇಶ ನೀಡಿದ್ದಾರೆ. ಈ ವೇಳೆ ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ಬ್ಲೋಕ್ ಪಂಚಾಯತ್ ಸದಸ್ಯೆ ಚಂದ್ರಾವತಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

RELATED NEWS

You cannot copy contents of this page