ಮುಳ್ಳೇರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾಸರಗೋಡು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಂಟಿ ಆಶ್ರಯದಲ್ಲಿ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂ ಉದ್ಘಾಟಿಸಿದರು. ನಿವೃತ್ತ ಉಪ ತಹಶೀಲ್ದಾರ್ ನಾರಾಯಣ ಗೋಸಾಡ ಮಾಹಿತಿ ನೀಡಿದರು. ವ್ಯಾಪಾರಿ ಘಟಕ ಅಧ್ಯಕ್ಷ ಗಣೇಶ್ ವತ್ಸ ಅಧ್ಯಕ್ಷತೆ ವಹಿಸಿದ್ದರು. ಸೇವಾ ಪ್ರತಿನಿಧಿ ರಾಜೇಶ್ವರಿ ಉಪಸ್ಥಿತರಿದ್ದರು. ಮೇಲ್ವಿಚಾರಕ ಸುರೇಶ್ ಸ್ವಾಗತಿಸಿ, ವಲಯ ಅಧ್ಯಕ್ಷ ಸುರೇಶ್ ಯಾದವ್ ವಂದಿಸಿದರು. ಶಿಕ್ಷಕ ವೇಣುಗೋಪಾಲ್ ನಿರ್ವಹಿಸಿದರು.
