ಮುಷ್ಕರ ಇತ್ಯರ್ಥಗೊಳಿಸಲು ಇನ್ನೂ ಮುಂದಾಗದ ರಾಜ್ಯ ಸರಕಾರ: ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಕೇಂದ್ರ ತೀರ್ಮಾನ

ತಿರುವನಂತಪುರ: ಆಶಾ ಕಾರ್ಯ ಕರ್ತೆಯರು ವೇತನ ಹೆಚ್ಚಿಸಬೇಕೆಂಬ ಪ್ರಧಾನ ಬೇಡಿಕೆ ಮುಂದಿರಿಸಿ ಆಶಾ ಕಾರ್ಯಕರ್ತೆಯರು ರಾಜ್ಯದಲ್ಲಿ ನಡೆಸುತ್ತಿರುವ  ಅನಿರ್ಧಿಷ್ಟಾವಧಿ ಮುಷ್ಕರ ಒಂದು ತಿಂಗಳು ದಾಟಿದೆ. ಅದು ಇನ್ನೂ ಮುಂದು ವರಿಯುತ್ತಿರುವಂತೆಯೇ  ಅದಕ್ಕೆ ಪರಿಹಾರ ಕಂಡುಕೊಳ್ಳುವ ಉಪಕ್ರಮಗಳು ರಾಜ್ಯ ಸರಕಾರದ ವತಿಯಿಂದ  ಈತನಕ ಉಂಟಾಗದಿರುವ ವೇಳೆಯಲ್ಲೇ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ನ ಸ್ಟೀರಿಂಗ್ ಗ್ರೂಪ್ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನ ಹೆಚ್ಚಿಸಲು ನಿರ್ಧರಿ ಸಿದೆ ಮತ್ತು ಸರಕಾರ ಈ ನಿಟ್ಟಿನಲ್ಲಿ ಮುಂದುವರಿಯಲಿ ದೆಯೆಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಆರೋಗ್ಯ ಮಿಶನ್ ಸ್ಟಿರಿಂಗ್ ಗ್ರೂಪ್ (ಎಂಎಸ್‌ಜಿ) ರಾಷ್ಟ್ರೀಯ ಆರೋಗ್ಯ ಮಿಶನ್ (ಎನ್‌ಎಚ್‌ಎಂ) ಅಡಿಯಲ್ಲಿ ನೀತಿ ನಿರೂಪಣೆ ಮತ್ತು ಕಾರ್ಯಾಚರಣಾ  ಸಂಸ್ಥೆಯಾಗಿದೆ.  ದೇಶಾದ್ಯಂತ ಶಿಶು ಮತ್ತು ತಾಯಂದಿರ ಮರಣ ಪ್ರಮಾಣನ್ನು ಕಡಿಮೆ ಮಾಡುವಲ್ಲಿ ಆಶಾ ಕಾರ್ಯಕರ್ತೆಯರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ.

ಕೇರಳ ಸರಕಾರಕ್ಕೆ ಸಂಬಂಧಿಸಿದಂತೆ  ಭಾರತ ಸರಕಾರವು ತನ್ನ ಸಂಪೂರ್ಣ ಬಾಕಿ ಹಣವನ್ನು ಪಾವತಿಸಿದೆ. ಆದರೆ ಅದರ ಬಳಕೆಯ ಪ್ರಮಾಣಪತ್ರವನ್ನು ಕೇರಳ ಸರಕಾರ ಈತನಕ ಕೇಂದ್ರಕ್ಕೆ ಸಲ್ಲಿಸಿಲ್ಲ. ಅದು ಲಭಿಸಿದ ಬಳಿಕ ಆಶಾ ಕಾರ್ಯಕರ್ತೆಯರಿಗೆ ಮತ್ತು ಕೇರಳ ರಾಜ್ಯಕ್ಕೆ ಅದರಂತೆ ಮೊತ್ತ ವನ್ನು ನೀಡಲಾಗುವುದು ಎಂದು ಸಚಿವ ನಡ್ಡಾ ಹೇಳಿದ್ದಾರೆ.

ಆಶಾ ಕಾರ್ಯಕರ್ತೆಯರ ಗೌರವ ಧ ಣವನ್ನು 21,000 ರೂ.ಗೆ ಏರಿಸ ಬೇಕು ಮತ್ತು ಅವರ ನಿವೃತ್ತಿ ಭತ್ಯೆ 5 ಲಕ್ಷ ರೂ. ನೀಡಬೇಕೆಂದು ರಾಜ್ಯ ಸಭೆಯಲ್ಲಿ ಕೇರಳದ ಯುಡಿಎಫ್ ಸಂ ದರು ಆಗ್ರಹಿಸಿದ್ದಾರೆ. ಕೇರಳದಲ್ಲಿ ಆಶಾ  ಕಾರ್ಯಕರ್ತರು ಆರಂಭಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ  ಅವರು ಮುಂದಿರಿಸಿರುವ ಬೇಡಿಕೆಯನ್ನು ಕೇಂದ್ರ ಸಚಿವ ಸುರೇಶ್‌ಗೋಪಿ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದರು. ಮಾತ್ರವಲ್ಲದೆ ಅವರ ಸವಲತ್ತುಗಳನ್ನು ಹೆಚ್ಚಿಸಬೇಕೆಂದು ಆಗ್ರಹಪಟ್ಟಿದ್ದಾರೆ.

2023-24ನೇ ವರ್ಷದಲ್ಲಿ ಕೇಂದ್ರ ಸರಕಾರದಿಂದ ಲಭಿಸಬೇಕಾಗಿದ್ದ ಮೊತ್ತ ಕೇರಳಕ್ಕೆ ಇನ್ನೂ ಲಭಿಸಿಲ್ಲವೆಂದು ಇನ್ನೊಂದೆಡೆ ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ಹೇಳಿದ್ದಾರೆ. ಆಶಾ ಕಾರ್ಯಕರ್ತರ ವೇತನ ಹೆಚ್ಚಿಸಬೇಕು ಎಂಬುವುದು ನಮ್ಮ ನಿಲುವಾಗಿದೆಯೆಂದೂ  ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page