ಮೂಡಂಬೈಲು ಸರಕಾರಿ ಶಾಲೆಯಲ್ಲಿ ಕಲಿಕೋತ್ಸವ
ಮಂಜೇಶ್ವರ :ಮೂಡಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಕಲಿಕೋತ್ಸವ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಕುಂಞ ಪಜಿಂಗಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಜೋರ್ಜ್ ಕ್ರಾಸ್ತಾ ಹಾಗೂ ಹಿರಿಯ ಅಧ್ಯಾಪಿಕೆ ದಯಾವತಿ ಸಾಲಿಯಾನ್ ಶುಭಾಶಂಸನೆಗೈದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ರಾಜಲಕ್ಷ್ಮಿ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳು ವಿವಿಧ ಕಲಿಕಾ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಶಿಕ್ಷಕಿ ಮೋಹಿನಿ ಸ್ವಾಗತಿಸಿ ಅಧ್ಯಾಪಿಕೆ ಪ್ರಿಯಾ ವಂದಿಸಿದರು. ಶಿಕ್ಷಕಿ ದೀಕ್ಷಾ ನಿರೂಪಿಸಿದರು. ಶಿಕ್ಷಕರಾದ ಬುಶ್ರಾ, ಮೊಯಿದೀನ್ ಲತೀಫ್, ರೆಹನಾ. ಹಾಗೂ ಸೌಮ್ಯ ನೇತೃತ್ವ ನೀಡಿದರು.