ಮೂರು ದಿನಗಳೊಳಗಾಗಿ ಮುಂಗಾರು ಮಳೆ ಪ್ರವೇಶ

ತಿರುವನಂತಪುರ: ಮೂರು ದಿನಗಳೊಳಗಾಗಿ ಕೇರಳಕ್ಕೆ ನೈಋತ್ಯ ಮುಂಗಾರು ಮಳೆ ಪ್ರವೇಶಿಸುವ ಸಾಧ್ಯತೆ ಇದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಅರಬೀ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಇನ್ನೊಂದೆಡೆ ಬಂಗಾಳಕೊಲ್ಲಿಯ ಆಳ ಕಡಲಲ್ಲೂ ವಾಯುಭಾರ ಕುಸಿತದ ಸಾಧ್ಯತೆ ಇದೆ. ಇದರ ಪರಿಣಾಮ ಕಾಸರಗೋಡು ಸೇರಿದಂತೆ 13 ಜಿಲ್ಲೆಗಳಲ್ಲಿ ಇಂದು ಹಾಗೂ ನಾಳೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಇದರಂತೆ ಕಾಸ ರಗೋಡು ಸೇರಿದಂತೆ ಹದಿಮೂರು ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಹಾಗೂ ನಾಳೆ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇಲಾಖೆ ಘೋಷಿಸಿದೆ.

RELATED NEWS

You cannot copy contents of this page