ಮೂರು ಮಕ್ಕಳ ಜೊತೆ ಯುವತಿ ನಾಪತ್ತೆ
ಕಾಸರಗೋಡು: ಕರಿವೇಡಗಂ ಪಡ್ಪು ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದ ಯುವತಿ ಹಾಗೂ ಮೂರು ಮಕ್ಕಳು ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಅಬ್ದುಲ್ ಹಕೀಂನ ಪತ್ನಿ ಜನತ್ತುಲ್ ನಿಶಾ (29) ಹಾಗೂ 11, 9, 8ವರ್ಷದ ಪ್ರಾಯದ ಮಕ್ಕಳು ನಾಪತ್ತೆಯಾದವರು. ಮಕ್ಕಳಲ್ಲಿ ಓರ್ವೆ ಪುತ್ರಿಯಾಗಿದ್ದಾಳೆ. ೨೪ರಂದು ಸಂಜೆ ಈ ನಾಲ್ಕು ಮಂದಿ ನಾಪತ್ತೆಯಾಗಿರುವುದಾಗಿ ಪತಿ ಅಬ್ದುಲ್ ಹಕೀಂ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬೇಡಗಂ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.