ಮೂರು ವರ್ಷದ ಬಾಲಕನ ಕೊಲೆಗೈದು ವಾಶಿಂಗ್ಮೆಷಿನ್ನಲ್ಲಿ ಇಟ್ಟ ಸ್ಥಿತಿಯಲ್ಲಿ
ಚೆನ್ನೈ: ತಮಿಳುನಾಡು ತಿರುನಲ್ವೇಲಿಯಲ್ಲಿ ಮೂರು ವರ್ಷ ಪ್ರಾಯದ ಬಾಲಕನನ್ನು ಕೊಲೆಗೈದು ಮೃತದೇಹವನ್ನು ವಾಶಿಂಗ್ಮೆಷಿನ್ನಲ್ಲಿ ಬಚ್ಚಿಡಲಾಗಿತ್ತು. ತಿರುನಲ್ವೇಲಿಯ ವಿಘ್ನೇಶ್- ರಮ್ಯಾ ದಂಪತಿ ಪುತ್ರ ಸಂಜಯ್ ಮೃತ ಪಟ್ಟ ಬಾಲಕ. ಘಟನೆಯಲ್ಲಿ ನೆರೆಮನೆಯ ತಂಗಮ್ಮಾಳ್ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಿಗ್ಗೆ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ನಾಪತ್ತೆಯಾಗಿದೆ. ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತಲುಪಿ ಸ್ಥಳೀಯ ಮನೆಗಳಲ್ಲಿ ತಪಾಸಣೆ ನಡೆಸಿದಾಗ ಮೃತದೇಹವನ್ನು ಗೋಣಿಯಲ್ಲಿ ಕಟ್ಟಿ ವಾಶಿಂಗ್ಮೆಷಿನ್ನೊಳಗೆ ಇರಿಸಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಈ ಮಧ್ಯೆ ಒಂದು ಮನೆಯಿಂದ ತಂಗಮ್ಮಾಳ್ ಪರಾರಿಯಾಗುತ್ತಿರುವುದು ಪೊಲೀಸರು ಗಮನಿಸಿದರು. ಶಂಕೆ ತೋರಿದ ಹಿನ್ನೆಲೆಯಲ್ಲಿ ಆಕೆಯ ಮನೆಯಲ್ಲಿ ತಪಾಸಣೆ ನಡೆಸಿದಾಗ ಮೃತದೇಹ ಪತ್ತೆಯಾಗಿತ್ತು. ಮೃತದೇಹವನ್ನು ಪೋಸ್ಟ್ಮಾರ್ಟಂಗೆ ಕಳುಹಿಸಿ ಕೊಡಲಾಗಿದೆ. ಇದೇ ವೇಳೆ ಕೊಲೆಗೆ ಕಾರಣವೇನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.