ಮೂವರು ಮಕ್ಕಳು ರೈಲು ಢಿಕ್ಕಿ ಹೊಡೆದು ಮೃತ್ಯು

ಚೆನ್ನೈ: ವಿಕಲಚೇತನರಾದ ಮೂವರು ಬಾಲಕರು ಹಳಿ ದಾಟುತ್ತಿದ್ದಾಗ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಚೆನ್ನೈಯಲ್ಲಿ  ನಡೆದಿದೆ.ಕಳೆದ  ಹಲವು ವರ್ಷಗಳಿಂದ ಚೆನ್ನೈಯಲ್ಲಿ ವಾಸಿಸುತ್ತಿರುವ ಕರ್ನಾಟಕ ನಿವಾಸಿಗಳಾದ ಕುಟುಂಬಗಳ ಮಕ್ಕಳಾದ ಸುರೇಶ್ (೧೫), ರವಿ (೧೫), ಮಂಜು ನಾಥ್ (೧೧) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಕರ್ನಾಟಕದಲ್ಲಿ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಶಿಕ್ಷಣ ಕಲಿಯುತ್ತಿರುವ ಈ ಮಕ್ಕಳು ದಸರಾ ರಜೆಯಲ್ಲಿ ಚೆನ್ನೈಯಲ್ಲಿರುವ ಹೆತ್ತವರ ಬಳಿಗೆ ತೆರಳಿದ್ದರು. ಊರಾಪಾಕ್ ಹಾಗೂ ವಂಡಲ್ಲೂರಾ ಮಧ್ಯೆ ಈ ಮಕ್ಕಳು ರೈಲು ಹಳಿ ದಾಟುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

RELATED NEWS

You cannot copy contents of this page