ಮೂವರು ಹೆಣ್ಮಕ್ಕಳ ಕುತ್ತಿಗೆ ಕೊಯ್ದು ಗಾಯಗೊಳಿಸಿ ತಂದೆ ಆತ್ಮಹತ್ಯೆ
ಕೋಟ್ಟಯಂ: ಮೂವರು ಹೆಣ್ಮ ಕ್ಕಳ ಕುತ್ತಿಗೆ ಕೊಯ್ದು ಕೊಲೆಗೈಯ್ಯ ಲೆತ್ನಿಸಿದ ತಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಲಾ ಸಮೀಪದ ರಾಮಪುರಂ ಎಂಬಲ್ಲಿ ನಡೆದಿದೆ. ರಾಮಪುರಂ ಚೇಟುಕುಳಂ ನಿವಾಸಿ ಜೋಮೋನ್ (೪೦) ಶಾಲಾ ವಿದ್ಯಾರ್ಥಿನಿಯರಾದ ತನ್ನ ಮೂವರು ಹೆಣ್ಮಕ್ಕಳ ಕುತ್ತಿಗೆಯನ್ನು ಕೊಯ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ಮಧ್ಯರಾತ್ರಿ ೧೨.೩೦ರ ವೇಳೆ ಈ ಘಟನೆ ನಡೆದಿದೆ. ಅನನ್ಯಾ (೧೩), ಅಮಯ್ (೧೦), ಅನಾಮಿಕ (೭) ಎಂಬೀ ಹೆಣ್ಮಕ್ಕಳ ಕುತ್ತಿಗೆಯನ್ನು ಜೋಮೋನ್ ಕೊಯ್ದು ಗಂಭೀರ ಗಾಯಗೊಳಿಸಿದ್ದಾನೆನ್ನ ಲಾಗುತ್ತಿದೆ. ಈ ಮೂವರನ್ನು ಗಂಭೀರ ಸ್ಥಿತಿಯಲ್ಲಿ ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಈ ಪೈಕಿ ಅನಾಮಿಕಳ ಸ್ಥಿತಿ ಅತೀ ಗಂಭೀರ ವಾಗಿದೆಯೆಂದು ತಿಳಿದುಬಂದಿದೆ. ಪತ್ನಿ ಉಪೇಕ್ಷಿಸಿ ಹೋದ ಬಳಿಕ ಕಳೆದ ಒಂದೂವರೆ ವರ್ಷದಿಂದ ಜೋಮೋನ್ ಮೂವರು ಹೆಣ್ಮ ಕ್ಕಳೊಂದಿಗೆ ವಾಸಿಸುತ್ತಿದ್ದನು. ಜೋಮೋನ್ ಈ ಕೃತ್ಯವೆಸಗಲು ಕಾರಣವೇನೆಂದು ತಿಳಿದುಬಂದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ.