ಮೇಯರ್ -ಕೆಎಸ್‌ಆರ್‌ಟಿಸಿ ಚಾಲಕನ ಮಧ್ಯೆ ವಾಗ್ವಾದ: ತನಿಖೆ ಮುಂದುವರಿಕೆ

ತಿರುವನಂತಪುರ: ತಿರುವನಂತಪುರ ಮೇಯರ್ ಆರ್ಯರಾಜೇಂದ್ರನ್ ಹಾಗೂ ಕೆಎಸ್‌ಆರ್‌ಟಿಸಿ ಚಾಲಕರ ಮಧ್ಯೆ ನಡೆದ ವಾಗ್ವಾದಕ್ಕೆ ಸಂಬಂಧಿಸಿ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಬಸ್‌ನ ಸಿಸಿ ಟಿವಿ ಮೆಮರಿಕಾರ್ಡ್ ನಾಪತ್ತೆಯಾದ ಘಟನೆಗೆ ಸಂಬಂಧಿಸಿ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಸುಬಿನ್‌ನನ್ನು ಪೊಲೀಸರು ತನಿಖೆಗೊಳಪಡಿಸುತ್ತಿದ್ದಾರೆ. ಯದು ಚಲಾಯಿಸುತ್ತಿದ್ದ ಬಸ್‌ನಲ್ಲಿ ಸುಬಿನ್ ಕಂಡೆಕ್ಟರ್ ಆಗಿದ್ದರು. ವಾಗ್ವಾದ ಹಾಗೂ ಚಾಲಕ ಬಸ್ ಚಾಲನೆ ವೇಳೆ ಕಾನೂನು ಉಲ್ಲಂಘನೆ ನಡೆಸಿದ್ದಾರೆಯೇ ಎಂದು  ತಿಳಿಯಲು ಪ್ರಯತ್ನ ನಡೆಯುತ್ತಿದೆ. ಕಾನೂನು ಉಲ್ಲಂಘಿಸಿದ್ದಲ್ಲಿ ಅದರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರಲು ಸಾಧ್ಯತೆ ಇದೆ. ಆದರೆ ಘಟನೆ ಬಳಿಕ ಮೆಮರಿಕಾರ್ಡ್ ನಾಪತ್ತೆಯಾಗಿರುವುದು ಸಂದಿಗ್ಧತೆಗೆ ಕಾರಣವಾಗಿದೆ.

You cannot copy contents of this page