ಮೈಲ್ಪಾರ- ಮಜಲ್ ರಸ್ತೆ ಶೋಚನೀಯ ಸ್ಥಿತಿಯಲ್ಲ್ಥಿ: ಸ್ಥಳೀಯರಿಂದ ರಸ್ತೆ ದಿಗ್ಬಂಧನ
ಮೊಗ್ರಾಲ್ ಪುತ್ತೂರು: ಕಳೆದ ೧೦ ವರ್ಷಕ್ಕಿಂತ ಹೆಚ್ಚಾಗಿ ಶೋಚನೀ ಯಾವಸ್ಥೆಯಲ್ಲಿರುವ ಸಂಚಾರ ಯೋಗ್ಯ ವಲ್ಲದ ರೀತಿಯಲ್ಲಿರುವ ಮೈಲ್ಪಾರ- ಮಜಲ್ ರಸ್ತೆಯನ್ನು ದುರಸ್ತಿಗೊಳಿಸ ಬೇಕೆಂದು ಆಗ್ರಹಿಸಿ ಜನಪರ ಮುಷ್ಕರ ಸಮಿತಿ ವತಿಯಿಂದ ನಿನ್ನೆ ಮೈಲ್ಪಾರ ಮಜಲ್ ರಸ್ತೆ ದಿಗ್ಬಂಧನ ನಡೆಸಲಾ ಯಿತು. ಮೊಗ್ರಾಲ್ ಪುತ್ತೂರು ಪಂ.ನ ಆಡಳಿತ ಸಮಿತಿ ಈ ಪ್ರದೇಶದೊಂದಗೆ ತೋರುವ ಅವಗಣನೆ ಕೊನೆಗೊಳಿಸ ಬೇಕೆಂದು, ಆಡಳಿತ ಸಮಿತಿಯ ಈ ನೀತಿಯನ್ನು ಬದಲಿಸಬೇಕೆಂದು ಮುಷ್ಕರ ನಿರತರು ಆಗ್ರಹಿಸಿದರು. ಈ ತಿಂಗಳ ೩೧ರ ಮುಂಚಿತ ಕಾಮಗಾರಿ ಆರಂಭಿಸದಿದ್ದರೆ ಲಭಿಸಿರುವ ೯ ಲಕ್ಷ ರೂ. ನಷ್ಟವಾಗಬಹುದಾದ ಅವಸ್ಥೆ ಇದ್ದು, ಇದನ್ನು ಕಳೆದುಕೊಳ್ಳಲು ಸ್ಥಳೀಯರು ಸಿದ್ಧರಲ್ಲವೆಂದು ಮುಷ್ಕರ ಸಮಿತಿ ಎಚ್ಚರಿಸಿದೆ.
ದಿಗ್ಬಂಧನ ಮುಷ್ಕರ ಹಿನ್ನೆಲೆಯಲ್ಲಿ ಕಾಸರಗೋಡು ನಗರ ಠಾಣೆಯ ಅಧಿಕಾ ರಿಗಳ ನೇತೃತ್ವದಲ್ಲಿ ಸಂಜೆ ಗುತ್ತಿಗೆದಾ ರನನ್ನು ಠಾಣೆಗೆ ಕರೆಸಿ ಸಮಸ್ಯೆ ಪರಿಹಾರ ನಡೆಸಲು ಭರವಸೆ ಲಭಿಸಿದ ಹಿನ್ನೆಲೆ ಯಲ್ಲಿ ಮುಷ್ಕರ ಕೊನೆಗೊಳಿಸಲಾಗಿದೆ.