ಮೊಗೇರ ಸರ್ವೀಸ್ ಸೊಸೈಟಿಯಿಂದ ಉದ್ಯೋಗ ಮಾಹಿತಿ ಶಿಬಿರ


ಕಾಸರಗೋಡು: ಮೊಗೇರ ಸರ್ವೀಸ್ ಸೊಸೈಟಿ ಹಾಗೂ ಆಲ್ ಇಂಡಿಯಾ ಕಾನ್ಫೆಡರೇಶನ್ ಆಫ್ ಎಸ್ಸಿ/ಎಸ್ಟಿ ಆರ್ಗನೈಸೇಶನ್ ಜಿಲ್ಲಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಮೇ 26ರಂದು ಪೂರ್ವಾಹ್ನ 9.30ಕ್ಕೆ ವಿದ್ಯಾನಗರ ಕಮ್ಯೂನಿಟಿ ಸ್ಕಿಲ್ ಪಾರ್ಕ್ ಸಭಾಂಗಣದಲ್ಲಿ ಉನ್ನತ ವಿದ್ಯಾಭ್ಯಾಸ, ಉದ್ಯೋಗ ಮಾಹಿತಿ ಶಿಬಿರ ಜರಗಲಿದೆ. ಕಾರ್ಯಕ್ರಮದಲ್ಲಿ ತಜ್ಞರು ಉನ್ನತ ವಿದ್ಯಾಭ್ಯಾಸ ಹಾಗೂ ಉದ್ಯೋಗ ಮಾಹಿತಿ ನೀಡುವರು. ಎಸ್ಎಸ್ಎಲ್ಸಿ, ಪ್ಲಸ್ಟು, ಪದವಿ ಮತ್ತು ಮೇಲ್ಪಟ್ಟ ವಿದ್ಯಾಭ್ಯಾಸ ಹೊಂದಿದ ವಿದ್ಯಾರ್ಥಿಗಳು ಪೋಷಕರೊಂದಿಗೆ ಪಾಲ್ಗೊಳ್ಳಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9562393482, 9995412723ರಲ್ಲಿ ಸಂಪರ್ಕಿಸಬಹುದಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು/ ಪೋಷಕರು 24ರ ಮೊದಲು ಹೆಸರು ನೋಂದಾಯಿಸಬೇಕಾಗಿದೆ.

You cannot copy contents of this page