ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ ಫಂಡ್‌ನಿಂದ 35 ಲಕ್ಷ ರೂ. ಹಿಂಪಡೆದ ಘಟನೆ: ಮಾಜಿ ಪ್ರಾಂಶುಪಾಲ ಇನ್‌ಚಾರ್ಜ್ ವಿರುದ್ಧ ಎಸ್‌ಎಂಸಿ ಚೆಯರ್‌ಮೆನ್‌ರಿಂದ ಪೊಲೀಸರಿಗೆ ದೂರು
ಕಾಸರಗೋಡು: ಮೊಗ್ರಾಲ್ ಶಾಲೆ ಅಭಿವೃದ್ಧಿ ಫಂಡ್‌ನಿಂದ ೩೫ ಲಕ್ಷ ರೂ. ಹಿಂಪಡೆದ ಮಾಜಿ ವಿಎಚ್‌ಎಸಿ ಪ್ರಾಂಶುಪಾಲ ಇನ್‌ಚಾರ್ಜ್ ಕೆ. ಅನಿಲ್ ವಿರುದ್ಧ ಮಾಜಿ ಎಸ್‌ಎಂಸಿ ಚೆಯರ್ ಮೆನ್ ಸಯ್ಯಿದ್ ಹಾದಿ ತಂಙಳ್, ಎಸ್‌ಎಂಸಿ ಚೆಯರ್‌ಮೆನ್ ಆರಿಫ್ ಎಂಬಿವರು ಕುಂಬಳೆ ಪೊಲೀ ರಿಗೆ ದೂರು ನೀಡಿದ್ದಾರೆ. ಶಾಲೆಯಲ್ಲಿ ನಡೆದ ಹಣಕಾಸು ವಂಚನೆ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಪಿಟಿಎ ವಿಜಿಲೆನ್ಸ್, ಡಿಡಿಗೆ ಹಾಗೂ ಪೊಲೀಸರಿಗೆ ದೂರು ನೀಡಿದೆ. ಶಾಲಾ ಪಿಟಿಎ ಸಭೆಯಲ್ಲಿ ಬೆಚ್ಚಿ ಬೀಳಿಸುವ ಈ ಹಣಕಾಸು ವಂಚನೆ ಬೆಳಕಿಗೆ ಬಂದಿದೆ. ಸೇವೆಯಿಂದ ನಿವೃತ್ತಿ ಹೊಂದಿದ ಮಾಜಿ ಮುಖ್ಯೋಪಾಧ್ಯಾಯ ಸುಕುಮಾರನ್ ತನ್ನ ಆಡಳಿತ ಕಾಲದ ಆರ್ಥಿಕ ವ್ಯವ ಹಾರಗಳನ್ನು ಆಡಿಟ್‌ಗೆ ವಿಧೇಯಗೊಳಿ ಸಿದಾಗ ವಂಚನೆ ನಡೆದಿರುವುದು ತಿಳಿದು ಬಂದಿದೆ. ಇದು ಪಿಟಿಎ ಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯಿತು. ಬಳಿಕ ಪಿಟಿಎ ಸದಸ್ಯರು ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಹಣ ಹಿಂತೆಗೆದಿರುವು ದಾಗಿ ತಿಳಿದುಬಂ ದಿದೆ. ಈ ಮಧ್ಯೆ ಪಿಟಿಎ ಸಭೆಯಲ್ಲಿ ಅಧ್ಯಾಪಕರು ಮೌನ ಪಾಲಿಸಿರುವುದು ಭಾರೀ ಟೀಕೆಗಳಿಗೂ ಕಾರಣವಾಯಿತು. 2023-24, 24-25 ವರ್ಷಗಳ ಶಾಲಾ ಅಭಿವೃದ್ಧಿಗಿರುವ ಎಸ್‌ಎಸ್ ಕೆ ಫಂಡ್ ಸಹಿತ ಮೊತ್ತ ವನ್ನು ಮಾಜಿ ಪ್ರಾಂಶುಪಾಲ ಇನ್ ಚಾರ್ಜ್ ವಂಚನೆ ನಡೆಸಿದ್ದಾರೆನ್ನಲಾ ಗಿದೆ. ಚೆಕ್ ಲೀಫ್‌ನಲ್ಲಿ ತಾವು ಹಾಕಿದ ಸಹಿಯನ್ನು ದುರುಪಯೋಗಗೊಳಿಸಿ ರುವುದಾಗಿ ಎಸ್‌ಎಂಸಿ ಚೆಯರ್‌ಮೆನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ನಕಲಿ ಸಹಿ ಹಾಕಿಯೂ ಹಣ ಹಿಂತೆಗೆಯಲಾಗಿದೆ. ಶಾಲೆಯ ದೈನಂದಿನ ಅಗತ್ಯಗಳಿಗೆಂದು ಸಣ್ಣ ಮೊತ್ತ ಬರೆದು ಸಹಿ ಹಾಕಿದ ಚೆಕ್‌ನಲ್ಲಿ ಬಳಿಕ ಹೆಚ್ಚಿನ ಮೊತ್ತ ಬರೆದು ಲಕ್ಷಾಂ ತರ ರೂಪಾಯಿಗಳನ್ನು ವಂಚನೆ ನಡೆಸಿ ರುವುದಾಗಿ ಎಸ್‌ಎಂಸಿ ಚೆಯರ್‌ಮೆನ್ ಹಾದಿ ತಂಙಳ್ ಹಾಗೂ ಆರಿಫ್ ತಿಳಿಸಿದ್ದಾರೆ. ಅನಿಲ್‌ರೊಂದಿಗೆ ಠಾಣೆಗೆ ಹಾಜರಾಗಲು ಪೊಲೀಸರು ತಿಳಿಸಿದ್ದಾರೆ. ತನಿಖೆ ನಡೆದರೆ ಇನ್ನಷ್ಟು ಮಾಹಿತಿಗಳು ಬಹಿರಂಗಗೊಳ್ಳಲಿದೆಯೆಂದು ಹೇಳಲಾ ಗಿದೆ. ಶಾಲಾ ಕಟ್ಟಡ ನಿರ್ಮಾಣ, ಶೌಚಾಲಯ ನಿರ್ಮಾಣ, ಕಲಿಕೋಪಕ ರಣಗಳನ್ನು ಖರೀದಿಸಲಿರುವ ಫಂಡ್ ಸಹಿತ ಸರಕಾರದ ವಿವಿಧ ಫಂಡ್ ಸಹಿತ ಈ ಕಳೆದ ವರ್ಷ 13 ಲಕ್ಷ ರೂ., ಈ ವರ್ಷ 22 ಲಕ್ಷ ರೂ.ಗಳನ್ನು ಸ್ವಂತ ಖಾತೆಗೆ ಬದಲಾಯಿಸಿಕೊಂಡಿ ರುವುದಾಗಿ ದೂರಲಾಗಿದೆ. ಈ ವಿಷಯದಲ್ಲಿ ಸಮಗ್ರ ತನಿಖೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ರಂಗಕ್ಕಿಳಿದಿವೆ.