ಮೊಗ್ರಾಲ್ ಪುತ್ತೂರು ರಸ್ತೆಯಲ್ಲಿ ಹಂಪ್ ತೆಗೆದು ಬಾರಿಕೇಡ್ ಸ್ಥಾಪನೆ: ಅಪಘಾತ ಸಾಧ್ಯತೆ- ನಾಗರಿಕರಿಗೆ ಆತಂಕ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪೆನಿಯ ಸಾರಿಗೆ ಪರಿಷ್ಕಾರಗಳು ಪ್ರಯಾಣಿಕರಿಗೆ ಸಮಸ್ಯೆ ಸೃಷ್ಟಿಸುತ್ತಿದೆಯೆಂದು ನಾಗರಿಕರು ಆರೋಪಿಸುತ್ತಿದ್ದಾರೆ. ಮೊಗ್ರಾಲ್ ಪುತ್ತೂರಿನಲ್ಲಿ ಯಾವುದೇ ಮುಂದಾಲೋಚನೆಯಿಲ್ಲದೆ ನಡೆಯುವ ಹೆದ್ದಾರಿ ನಿರ್ಮಾಣ ಚಟುವಟಿಕೆಯಿಂ ದಾಗಿ ಅಪಘಾತಗಳಿಗೆ ಕಾರಣವಾಗು ತ್ತಿರುವುದಾಗಿಯೂ ದೂರಲಾಗಿದೆ. ಒಂದು ಭಾಗದಲ್ಲಿ ಸರ್ವೀಸ್ ರಸ್ತೆ ಮುಚ್ಚುಗಡೆಗೊಳಿಸಿ ಮೂರು ವಾರಗಳಾಯಿತು. ಮತ್ತೊಂದೆಡೆ ಸಾವಿರಾರು ವಿದ್ಯಾರ್ಥಿಗಳು ತಲುಪುವ ಶಾಲಾ ರಸ್ತೆಯೂ ಇದೆ. ಇಲ್ಲಿನ ಕೆಳ ಸೇತುವೆ ಸಮೀಪ ನಾಗರಿಕರ ವಿನಂತಿ ಮೇರೆಗೆ ಸ್ಥಾಪಿಸಿದ ಹಂಪ್ ಹೊರತು ಪಡಿಸಿ ಬಾರಿಕೇಡ್ ಸ್ಥಾಪಿಸಲಾಗಿದೆ. ಹಂಪ್ ತೆರವುಗೊಳಿಸಿದುದರಿಂದ ಜಂಕ್ಷನ್‌ನಲ್ಲಿ ಮೂರು ಕಡೆಗಳಿಂದ ಅಪರಿಮಿತ ವೇಗದಲ್ಲಿ ವಾಹನಗಳು ತಲುಪುತ್ತಿವೆಯೆಂದೂ ನಾಗರಿಕರು ತಿಳಿಸುತ್ತಿದ್ದಾರೆ. ಇದರಿಂದ ಶಾಲಾ ಆರಂಭಗೊಂಡ ಬಳಿಕ ರಸ್ತೆ ದಾಟುವ ವೇಳೆ ಅಪಾಯ ಸಾಧ್ಯತೆ ಇದೆ. ಅದನ್ನು ಪರಿಗಣಿಸಿ ಹಂಪ್ ಮರು ಸ್ಥಾಪಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

You cannot copy contents of this page