ಮೊಗ್ರಾಲ್‌ನಲ್ಲಿ ಮನೆಗೆ ನುಗ್ಗಿ 20,000 ರೂ. ಕಳವು ಸ್ಥಳೀಯರಲ್ಲಿ ಆತಂಕ
ಮೊಗ್ರಾಲ್: ಇಲ್ಲಿನ ಕಡಪ್ಪುರದ ಟೆಂಪೊ ಚಾಲಕ ಬಾಸಿತ್‌ರ ಮನೆಯಲ್ಲಿ ಕಳ್ಳ ನುಗ್ಗಿ 20,000 ರೂ. ಅಪಹರಿಸಿದ್ದಾನೆ. ಮನೆ ಮಂದಿ ಬೀಗ ಜಡಿದು ಸಂಬಂಧಿಕರ ಮನೆಗೆ ತೆರಳಿದ್ದರು. ರಾತ್ರಿ ಹಿಂತಿರುಗಿದಾಗ ಕಳವು ನಡೆದ ಬಗ್ಗೆ ತಿಳಿದು ಬಂದಿದೆ. ಅಡುಗೆಕೋಣೆಯ ಭಾಗದಿಂದ ಬಾಗಿಲಿನ ಬೀಗ ಮುರಿದು ಒಳನುಗ್ಗಿ ಕಳವು ನಡೆಸಲಾಗಿದೆ. ಈ ಬಗ್ಗೆ ಬಾಸಿತ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ತಲುಪಿ ಪರಿಶೀಲಿಸಿದ್ದಾರೆ. ಕಳವು ಹಾಡಹಗಲೇ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಮೊದಲು ಮಸೀದಿ ಇಮಾಮ್‌ನ ಕೊಠಡಿಯಿಂದ 35,000 ರೂ. ಅಪಹರಿಸಲಾಗಿತ್ತು. ಈ ಪ್ರಕರಣದಲ್ಲಿ ಯಾವುದೇ ಪ್ರಗತಿ ಸಾಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಕಳವು ಪ್ರಕರಣಗಳಲ್ಲಿ ತನಿಖೆ ಪ್ರಗತಿಯಾಗದೆ ಇರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.