ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಬದಿಯಡ್ಕ: ರಾತ್ರಿ ಊಟಮಾಡಿ ನಿದ್ರಿಸಿದ್ದ ಯುವಕ ಬೆಳಿಗ್ಗೆ ನೋಡಿದಾಗ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೆರಡಾಲ ಚುಳ್ಳಿಕ್ಕಾನ ನಿವಾಸಿ ಸಿ.ಎಚ್. ಬಾಲಕೃಷ್ಣ (33) ಮೃತಪಟ್ಟ ವ್ಯಕ್ತಿ. ತಂದೆಯ ಸಹೋದರಿ ಸೀತು ಹಾಗೂ ಬಾಲಕೃಷ್ಣ ಮಾತ್ರವೇ ಮನೆಯಲ್ಲಿ ವಾಸಿಸುತ್ತಿದ್ದರು. ಶನಿವಾರ ರಾತ್ರಿ ಊಟ ಮಾಡಿ ಬಾಲಕೃಷ್ಣ ನಿದ್ರಿಸಿದ್ದರು. ನಿನ್ನೆ ಮುಂಜಾನೆ ಇವರು ಮನೆ ಸಮೀಪದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕಂಡು ಬಂದಿದೆ. ಬದಿಯಡ್ಕ ಪೊಲೀಸರು ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅವಿವಾಹಿತನಾಗಿದ್ದ ಬಾಲಕೃಷ್ಣ ಬದಿಯಡ್ಕದಲ್ಲಿ ಚಪ್ಪರ ಹಾಗೂ ಡೆಕೊರೇಶನ್ ಸಂಸ್ಥೆಯ ನೌಕರನಾಗಿದ್ದರು. ಚುಳ್ಳಿಕ್ಕಾನದ ದಿ| ಬಾಬು- ಲೀಲಾ ದಂಪತಿ ಪುತ್ರನಾದ ಮೃತರು ಸಹೋದರ ರಾಧಾಕೃಷ್ಣ, ಸಹೋದರಿ ಅನಿತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.