ಯುವಕನ ಕೊಲೆಗೆ ಯತ್ನ : ಐದು ಮಂದಿ ಆರೋಪಿಗಳ ಸೆರೆ

ಬದಿಯಡ್ಕ: ಬೇಳ ಮೇಲಿನ ನೀರ್ಚಾಲ್‌ನ ಜಯಶ್ರೀ ನಿಲಯದ ಬಿ. ಸೂರಜ್ (27) ಎಂಬವರಿಗೆ ಹಲ್ಲೆಗೈದು ಕೊಲೆಗೈಯ್ಯಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಆರೋಪಿಗಳನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ನೀರ್ಚಾಲು ಮಾಡತ್ತಡ್ಕದ ಕೆ. ಧೀರಜ್ (28), ನೆಕ್ರಾಜೆ ಚೂರಿಪಳ್ಳದ ಕೆ. ಸುಧೀಶ್ (25), ಮಧೂರಿನ ಶೈಲೇಶ್ (20), ನೆಕ್ರಾಜೆ ನೆಲ್ಲಿಕಟ್ಟೆಯ ಸುಧೀಶ್ (24), ಮಧೂರಿನ ವಿಷ್ಣು ಪ್ರಸಾದ್ (28) ಎಂಬಿವರನ್ನು ಬದಿಯಡ್ಕ ಎಸ್.ಐ ನಿಖಿಲ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಫೆ. 16ರಂದು ಸಂಜೆ ನೀರ್ಚಾಲ್‌ನಲ್ಲಿ ಮಾರಕಾ ಯುಧಗಳೊಂದಿಗೆ ಕಾರಿನಲ್ಲಿ ತಲುಪಿದ ತಂಡ ಸೂರಜ್‌ನನ್ನು ತಡೆದು ನಿಲ್ಲಿಸಿ ಹಲ್ಲೆಗೈದು ಚಾಕುವಿನಿಂದ ಇರಿದು ಕೊಲೆಗೈಯ್ಯಲು ಯತ್ನಿಸಿರುವುದಾಗಿ ದೂರಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಬಂಧಿತರಾದ ಐದು ಮಂದಿ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy contents of this page