ಯುವಕನಿಗೆ ಇರಿತ:  ಕೊಲೆಯತ್ನ ಪ್ರಕರಣ ದಾಖಲು

ಕಾಸರಗೋಡು: ಯುವಕನಿಗೆ ಇರಿದು ಗಾಯಗೊಳಿಸಿದ ದೂರಿನಂತೆ ಕಾಸರಗೋಡು ಕಡಪುರದ ಬಿಜೆಪಿ ಕೌನ್ಸಿಲರ್, ಕಾಸರಗೋಡು ಕಸಬಾದ ಅಜಿತ್ (೩೯)ರ ವಿರುದ್ಧ ಕಾಸರಗೋಡು ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು ನೆಲ್ಲಿಕುಂಜೆ ಕಸಬಾ ಶ್ರೀ ಕುರುಂಬಾ ಭಗವತೀ ಕ್ಷೇತ್ರ ಬಳಿ ನಿವಾಸಿ ಜಿಜು ಸುರೇಶ್ (೩೬) ಎಂಬವರು ನೀಡಿದ ದೂರಿ ನಂತೆ ಈ ಪ್ರಕರಣ ದಾಖಲಿಸ ಲಾಗಿದೆ. ಜನವರಿ ೩೧ರಂದು ರಾತ್ರಿ ನೆಲ್ಲಿಕುಂಜೆಯಲ್ಲಿ ಆರೋಪಿ ತನಗೆ ಇರಿದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಜಿಜು ಸುರೇಶ್ ಆರೋಪಿಸಿದ್ದಾರೆ. ಗಾಯಗೊಂಡ ಜಿಜುವನ್ನು ಮಂಗಳೂರಿನ ಆಸ್ಪತ್ರೆ ಯೊಂದರಲ್ಲಿ ದಾಖಲಿಸಲಾಗಿದೆ.

You cannot copy contents of this page