ಯುವಕನಿಗೆ ಹಲ್ಲೆ: ೫ ಮಂದಿಗೆ ಕೇಸು
ಕುಂಬಳೆ: ಮೊಗ್ರಾಲ್ ಬಣ್ಣಾತಂಪಡವ್ ನಿವಾಸಿ ಶಂಸು ಯಾನೆ ಪೂಚಕ್ಕಣ್ಣನ್ ಶಂಸು (೩೮) ಎಂಬವರಿಗೆ ಹಲ್ಲೆಗೈದು ಗಾಯಗೊಳಿಸಿದ ಆರೋಪದಂತೆ ಐದು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೊಗ್ರಾಲ್ ನಿವಾಸಿಗಳಾದ ಕುಂಞಹಮ್ಮದ್, ಫಾರೂಕ್, ನೌಶಾದ್, ಗಫೂರ್, ನೌಶಾದ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ತಿಂಗಳ ೧೮ರಂದು ಈ ಐದು ಮಂದಿ ತಂಡ ಶಂಸುರನ್ನು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಇದರಿಂದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಿನ್ನೆ ಪೊಲೀಸರು ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.